ADVERTISEMENT

ಹೋಳಿ ಹಬ್ಬದಂದೇ ಸ್ನಾನಕ್ಕೆ ನದಿಗೆ ಹೋದ 4 ಯುವಕರು ಸಾವು

ಪಿಟಿಐ
Published 25 ಮಾರ್ಚ್ 2024, 15:18 IST
Last Updated 25 ಮಾರ್ಚ್ 2024, 15:18 IST
ಕೆರೆಯಲ್ಲಿ ಮುಳುಗಿ ಸಾವು (ಪ್ರಾತಿನಿಧಿಕ ಚಿತ್ರ)
ಕೆರೆಯಲ್ಲಿ ಮುಳುಗಿ ಸಾವು (ಪ್ರಾತಿನಿಧಿಕ ಚಿತ್ರ)   

ಹೈದರಾಬಾದ್‌: ಹೋಳಿ ಹಬ್ಬ ಆಚರಿಸಿದ ಬಳಿಕ ಸ್ನಾನ ಮಾಡಲು ನದಿಗೆ ತೆರಳಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುಮುರಮ್ ಭೀಮ್‌ ಆಸಿಫಾಬಾದ್‌ ಜಿಲ್ಲೆಯ ತಾಟಿಪಲ್ಲಿ ಗ್ರಾಮದ ಯುವಕರು ವಾರ್ಧಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಸೋಮವಾರ ಈ ಘಟನೆ ನಡೆದಿದೆ. 

ಹೋಳಿ ಆಚರಣೆ ನಂತರ ಸ್ನಾನಕ್ಕೆಂದು ನದಿಗೆ ಇಳಿದ ನಾಲ್ವರು ಯುವಕರಲ್ಲಿ ಯಾರಿಗೂ ಈಜು ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕರು 22 ರಿಂದ 25 ವರ್ಷ ವಯಸ್ಸಿನವರು ಎನ್ನಲಾಗಿದೆ. 

ಸ್ಥಳೀಯ ಮೀನುಗಾರರು ಹಾಗೂ ಈಜುಗಾರರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ನದಿಯಿಂದ ಹೊರತೆಗೆದರು. ಪ್ರಾಥಮಿಕ ತನಿಖೆ ಪ್ರಕಾರ ಯುವಕರೆಲ್ಲರೂ ಮದ್ಯಪಾನ ಮಾಡಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.