ಸಾಂದರ್ಭಿಕ ಚಿತ್ರ
ಮಂದವಲ್ಲಿ,: ಬಾಲಕಿ ಮೇಲೆ ಬಾಲಕನೊಬ್ಬನು ಅತ್ಯಾಚಾರ ಎಸಗಿದ್ದಾನೆ ಎನ್ನಲಾದ ಕೃತ್ಯವನ್ನು ‘ಚಿತ್ರೀಕರಿಸಿ’, ವಿಡಿಯೊ ಹಂಚಿಕೊಂಡಿದ್ದ ಆರೋಪದಡಿ ಆಂಧ್ರಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮೇ 15ರಂದು ನಡೆದಿದ್ದ ಈ ಕೃತ್ಯ ಈಚೆಗೆ ಬಯಲಾಗಿತ್ತು. ಬಾಳೆ ಬಾಲಸುಬ್ರಹ್ಮಣ್ಯಂ (22), ಗಂಟಶಾಲಾ ಚಂದ್ರಶೇಖರ (28), ಪೆದ್ದಿರೆಡ್ಡಿ ಧರ್ಮತೇಜ (19), ಜಯಮಂಗಲ ಹರಿಕೃಷ್ಣ (20) ಬಂಧಿತರು.
ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದುದನ್ನು ಗಮನಿಸಿದ್ದ 10ನೇ ತರಗತಿ ವಿದ್ಯಾರ್ಥಿ, ಶಾಲೆಗೆ ಕರೆದೊಯ್ಯುವ ನೆಪದಲ್ಲಿ ಕೃತ್ಯ ಎಸಗಿದ್ದ. ಬಾಲಕನಿಗೆ ಪರಿಚಿತರಾಗಿದ್ದ ನಾಲ್ವರು ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಹಲವರೊಂದಿಗೆ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.