ADVERTISEMENT

ಗುವಾಹಟಿಯಲ್ಲಿ ವಿಪರೀತ ಮಳೆ: ಭೂಕುಸಿತದಿಂದ ನಾಲ್ವರ ಸಾವು

ಪಿಟಿಐ
Published 14 ಜೂನ್ 2022, 11:09 IST
Last Updated 14 ಜೂನ್ 2022, 11:09 IST
ಗುವಾಹಟಿ ನಗರದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ
ಗುವಾಹಟಿ ನಗರದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ   

ಗುವಾಹಟಿ: ವಿಪರೀತ ಮಳೆಯಿಂದಾಗಿ ಗುವಾಹಟಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ನಗರದಾದ್ಯಂತ ಪ್ರವಾಹ ಉಂಟಾಗಿದೆ ಎಂದು ಅಸ್ಸಾಂನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಕೌಸ್ತವ್‌ ತಾಲುಕ್‌ದಾರ್‌ ಮಂಗಳವಾರ ತಿಳಿಸಿದ್ದಾರೆ.‌

‘ಬೊರಾಗಾಂವ್‌ ಪ್ರದೇಶದ ನಿಜಾರಪಾರ್ನಲ್ಲಿ ಬೆಟ್ಟದ ಬಳಿಯ ಮನೆಯೊಂದರ ಮೇಲೆ ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಭೂಕುಸಿತ ಸಂಭವಿಸಿ, ಮನೆಯಲ್ಲಿದ್ದ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಅವರು ಹೇಳಿದರು.

ಮಂಗಳವಾರ ಮೃತಪಟ್ಟ ನಾಲ್ವರು ಮಂದಿ ಸೇರಿದಂತೆ, ಈ ವರ್ಷ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.