ADVERTISEMENT

ಕೇರಳ: 40 ವರ್ಷದ ಆನೆಯ ಶವ ಪತ್ತೆ

ಪಿಟಿಐ
Published 24 ಜನವರಿ 2021, 9:59 IST
Last Updated 24 ಜನವರಿ 2021, 9:59 IST
ಆನೆಗಳು–ಸಾಂದರ್ಭಿಕ ಚಿತ್ರ
ಆನೆಗಳು–ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ವಿಥುರಾದ ಕಲ್ಲಾರ್‌ ಬಳಿ 40 ವರ್ಷದ ಆನೆಯ ಶವ ಶನಿವಾರ ಪತ್ತೆಯಾಗಿದೆ. ಈ ವೇಳೆ 9 ತಿಂಗಳ ಆನೆ ಮರಿ, ತನ್ನ ತಾಯಿಯನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಖಾಸಗಿ ತೋಟವೊಂದರಲ್ಲಿ ಆನೆಯ ಶವ ಪತ್ತೆಯಾಗಿತ್ತು. ಈ ಬಗ್ಗೆ ರಬ್ಬರ್‌ ಟ್ಯಾಪರ್‌ಗಳು ಪೊಲೀಸರಿಗೆ ತಿಳಿಸಿದರು. ಪೊಲೀಸರು ಈ ಮಾಹಿತಿಯನ್ನು ಅರಣ್ಯ ಅಧಿಕಾರಿಗಳಿಗೆ ರವಾನಿಸಿದರು.

‘ತಾಯಿ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಆನೆ, ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದಾಗಿ ಮೃತಪಟ್ಟಿರುವುದು ಪರೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಆನೆ ಮರಿ ತನ್ನ ತಾಯಿಯ ಬಳಿ ಯಾರನ್ನು ಬರಲು ಬಿಡುತ್ತಿರಲಿಲ್ಲ. ಮಧ್ಯಾಹ್ನ 12 ಗಂಟೆಯ ಬಳಿಕ ಮರಿಯನ್ನು ಕುತ್ತೂರ್‌ನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.