ADVERTISEMENT

2018ರಿಂದ ವಿದೇಶದಲ್ಲಿ 403 ಭಾರತೀಯ ವಿದ್ಯಾರ್ಥಿಗಳ ಸಾವು: ಕೆನಡಾದಲ್ಲಿ ಹೆಚ್ಚು

ಪಿಟಿಐ
Published 2 ಫೆಬ್ರುವರಿ 2024, 14:18 IST
Last Updated 2 ಫೆಬ್ರುವರಿ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: 2018ರಿಂದ ಈವರೆಗೆ ನೈಸರ್ಗಿಕ ಅವಘಡ, ಅಪಘಾತ ಮತ್ತು ವೈದ್ಯಕೀಯ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ 403 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೆನಡಾದಲ್ಲಿಯೇ ಅತಿ ಹೆಚ್ಚು ಅಂದರೆ 91 ಸಾವುಗಳು ವರದಿಯಾಗಿವೆ. 48 ಸಾವುಗಳೊಂದಿಗೆ ಯುಕೆ ನಂತರದ ಸ್ಥಾನದಲ್ಲಿದೆ.

ADVERTISEMENT

ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ‌ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕಲ್ಯಾಣ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಆದ್ಯತೆಯ ಆಧಾರದ ಮೇಲೆ ಪ್ರತಿಕ್ರಿಯಿಸುತ್ತವೆ ಎಂದೂ ಅವರು ತಿಳಿಸಿದ್ದಾರೆ.

2018ರಿಂದ ವಿದೇಶದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿಗಳು (ದೇಶ‌ವಾರು ವಿವರ)

ಕೆನಡಾ91
ಯುಕೆ48
ರಷ್ಯಾ40
ಯುಎಸ್‌36
ಆಸ್ಟ್ರೇಲಿಯಾ35
ಉಕ್ರೇನ್‌21
ಜರ್ಮನಿ20
ಸೈಪ್ರಸ್‌14
ಫಿಲಿಪೈನ್ಸ್10
ಇಟಲಿ10
ಕತಾರ್ 9
ಚೀನಾ 9
ಕಿರ್ಗಿಸ್ತಾನ್‌9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.