ADVERTISEMENT

ಹಿಂದೂಗಳ 4,046 ಅರ್ಜಿಗಳು ಬಾಕಿ; ಹಳೆ ಕಾನೂನಿನಡಿ 4,171 ವಿದೇಶಿಯರಿಗೆ ಪೌರತ್ವ

ಪಿಟಿಐ
Published 4 ಆಗಸ್ಟ್ 2021, 13:15 IST
Last Updated 4 ಆಗಸ್ಟ್ 2021, 13:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಫ್ಗಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸೇರಿದ ಹಿಂದೂಗಳಿಂದ ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಲಾದ ಒಟ್ಟು 4,046 ಅರ್ಜಿಗಳು ವಿವಿಧ ರಾಜ್ಯ ಸರ್ಕಾರಗಳ ಬಳಿ ಬಾಕಿ ಇವೆ ಎಂದು ರಾಜ್ಯಸಭೆಗೆ ಬುಧವಾರ ತಿಳಿಸಲಾಯಿತು.

ಕಳೆದ ಐದು ವರ್ಷಗಳಲ್ಲಿ 2016 ರಿಂದ 2020 ರವರೆಗೆ 4,171 ವಿದೇಶಿಯರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದರು.

ಪೌರತ್ವಕ್ಕಾಗಿ ಹಿಂದೂಗಳು ಸಲ್ಲಿಸಿರುವ ಅರ್ಜಿಗಳ ಪೈಕಿ ರಾಜಸ್ಥಾನ ಸರ್ಕಾರ 1,541, ಮಹಾರಾಷ್ಟ್ರ ಸರ್ಕಾರ 849, ಗುಜರಾತ್ ಸರ್ಕಾರ 555, ಮಧ್ಯ ಪ್ರದೇಶದಲ್ಲಿ 490, ಛತ್ತೀಸಗಡ 268 ಮತ್ತು ದೆಹಲಿಯಲ್ಲಿ 123 ಬಾಕಿಯಿವೆ. ಇದರ ಜೊತೆಗೆ ಹಿಂದೂಗಳ 10 ಅರ್ಜಿಗಳು ಕೇಂದ್ರ ಸರ್ಕಾರದ ಬಳಿ ಬಾಕಿ ಇವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಕಳೆದ ಐದು ವರ್ಷಗಳಲ್ಲಿ 2016 ರಲ್ಲಿ 1,105, 2017 ರಲ್ಲಿ 814, 2018 ರಲ್ಲಿ 628, 2019 ರಲ್ಲಿ 986 ಮತ್ತು 2020 ರಲ್ಲಿ 638 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಜನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ಪೌರತ್ವ ಕಾಯ್ದೆ 1955 ರ ಅಡಿಯಲ್ಲಿ ನೀಡಲಾಗಿದೆ. ಆದಾಗ್ಯೂ, 2019ರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಯಾರೊಬ್ಬರಿಗೂ ಭಾರತೀಯ ಪೌರತ್ವವನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ 1,089, ರಾಜಸ್ಥಾನದಲ್ಲಿ 751, ಮಧ್ಯಪ್ರದೇಶದಲ್ಲಿ 535, ಮಹಾರಾಷ್ಟ್ರದಲ್ಲಿ 446, ಹರಿಯಾಣದಲ್ಲಿ 303, ದೆಹಲಿಯಲ್ಲಿ 301, ಪಶ್ಚಿಮ ಬಂಗಾಳದಲ್ಲಿ 146, ಉತ್ತರ ಪ್ರದೇಶದಲ್ಲಿ 145, 75 ಉತ್ತರಾಖಂಡದಲ್ಲಿ, ತಮಿಳುನಾಡಿನಲ್ಲಿ 73, ಕರ್ನಾಟಕದಲ್ಲಿ 72 ಮತ್ತು ಕೇರಳದಲ್ಲಿ 65 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.