ADVERTISEMENT

ಭಾರತೀಯರ ಅಪಹರಣ: ನಾಳೆ ಹಸ್ತಾಂತರ ಸಾಧ್ಯತೆ

ಪಿಟಿಐ
Published 11 ಸೆಪ್ಟೆಂಬರ್ 2020, 15:12 IST
Last Updated 11 ಸೆಪ್ಟೆಂಬರ್ 2020, 15:12 IST
ಅರುಣಾಚಲ ಪ್ರದೇಶದ ಬೂಮ್ಲಾ ಬಳಿಯ ಇಂಡೊಚೈನಾ ಗಡಿ ಪ್ರದೇಶ (ಸಾಂದರ್ಭಿಕ ಚಿತ್ರ)
ಅರುಣಾಚಲ ಪ್ರದೇಶದ ಬೂಮ್ಲಾ ಬಳಿಯ ಇಂಡೊಚೈನಾ ಗಡಿ ಪ್ರದೇಶ (ಸಾಂದರ್ಭಿಕ ಚಿತ್ರ)   

ನವದೆಹಲಿ: ಅರುಣಾಚಲ ಪ್ರದೇಶದ ಸುಭಾನ್‌ಸಿರಿ ಜಿಲ್ಲೆಯ ಗಡಿಭಾಗದಲ್ಲಿ ಏಕಾಏಕಿ ನಾಪತ್ತೆಯಾಗಿದ್ದ ಐವರು ಸ್ಥಳೀಯ ಯುವಕರನ್ನು ಶನಿವಾರ ಭಾರತೀಯ ಅಧಿಕಾರಿಗಳಿಗೆ ಚೀನಾ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದುಕೇಂದ್ರ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಸೆಪ್ಟೆಂಬರ್‌ 4ರಂದು ಈಯುವಕರು ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು.ಯುವಕರ ಜತೆ ಇತರರೂ ಕಾಡಿಗೆ ತೆರಳಿದ್ದರು. ಅವರಲ್ಲಿ ಇಬ್ಬರು ಗ್ರಾಮಕ್ಕೆ ಮರಳಿ, ಚೀನಾ ಸೇನೆ ಯುವಕರನ್ನು ಅಪಹರಿಸಿರುವ ಕುರಿತು ಮಾಹಿತಿ ನೀಡಿದ್ದರು.

ಯುವಕರು ನಾಪತ್ತೆಯಾದ ವಿಷಯವನ್ನು ಭಾರತೀಯ ಸೇನೆಯು ಹಾಟ್‌ಲೈನ್ ಮೂಲಕ ಚೀನಾ ಸೇನೆಯ ಗಮನಕ್ಕೆ ತಂದಿತ್ತು. ಐವರು ಭಾರತೀಯ ಯುವಕರು ತಮ್ಮ ವಶದಲ್ಲಿರುವುದಾಗಿ ಚೀನಾ ದೃಢಪಡಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.