ADVERTISEMENT

ಕ್ರಿಕೆಟ್‌ ಆಡುತ್ತಿದ್ದ ವೈದ್ಯರು: ಐದು ವರ್ಷದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 16:27 IST
Last Updated 24 ಅಕ್ಟೋಬರ್ 2024, 16:27 IST
<div class="paragraphs"><p>ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)</p></div>

ಕ್ರಿಕೆಟ್‌ (ಪ್ರಾತಿನಿಧಿಕ ಚಿತ್ರ)

   

ಬುಡೌನ್‌ (ಉತ್ತರ ಪ್ರದೇಶ) (ಪಿಟಿಐ): ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾಳೆ. ಚಿಕಿತ್ಸೆ ನೀಡಬೇಕಾದ ವೈದ್ಯರು ಮತ್ತು ಸಿಬ್ಬಂದಿ ಕ್ರಿಕೆಟ್‌ ಆಡುವುದಲ್ಲಿ ತಲ್ಲೀನರಾಗಿದ್ದ ಕಾರಣ ಮಗಳು ಅಸುನೀಗಿದ್ದಾಳೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಈ ಆರೋಪಗಳ ಸಂಬಂಧ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಮೃತ ಬಾಲಕಿಯನ್ನು ಸೋಫಿಯಾ ಎಂದು ಗುರುತಿಸಲಾಗಿದೆ. ಮಗಳಿಗೆ ಚಿಕಿತ್ಸೆ ಕೊಡಿಸಲು ಆಕೆಯ ತಂದೆ ನಜೀಂ ವೈದ್ಯಕೀಯ ಕಾಲೇಜಿಗೆ ಕರೆತಂದಿದ್ದರು. ಆ ವೇಳೆ ಆಸ್ಪತ್ರೆಯಲ್ಲಿ ಮಕ್ಕಳತಜ್ಞರು ಇರಲಿಲ್ಲ. ಕೆಲ ಸಿಬ್ಬಂದಿಯ ಸೂಚನೆ ಮೇರೆಗೆ ವಿವಿಧ ಕೊಠಡಿಗಳಲ್ಲಿ ವೈದ್ಯರಿಗಾಗಿ ಅಲೆದಾಡಬೇಕಾಯಿತು. ಕೆಲ ಹೊತ್ತಿನಲ್ಲಿಯೇ ಮಗಳು ಕೊನೆಯುಸಿರೆಳೆದಳು ಎಂದು ನಜೀಂ ದೂರಿದ್ದಾರೆ.

‘ನಾನು ಆಸ್ಪತ್ರೆಯಿಂದ ತೆರಳುತ್ತಿದ್ದಾಗ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕ್ರಿಕೆಟ್‌ ಆಡುವುದರಲ್ಲಿ ತಲ್ಲೀನರಾಗಿದ್ದದ್ದು ಕಂಡು ಬಂದಿತು’ ಎಂದು ನಜೀಂ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.