ಅಯೋಧ್ಯೆ ರಾಮಮಂದಿರ
(ಪಿಟಿಐ ಚಿತ್ರ)
ಅಯೋಧ್ಯೆ (ಉತ್ತರಪ್ರದೇಶ): ಮೌನಿ ಅಮಾವಾಸ್ಯಾ ಸಂದರ್ಭದಲ್ಲಿ, ಪವಿತ್ರ ಸ್ನಾನ ಮಾಡಲು ಭಕ್ತರು ಪ್ರವಾಹೋಪಾದಿಯಲ್ಲಿ ಹರಿದುಬಂದ ಕ್ಷಣಕ್ಕೆ ಅಯೋಧ್ಯೆಯ ಸರಿಯು ನದಿ ಸಾಕ್ಷಿಯಾಯಿತು.
ಕಳೆದ 72 ಗಂಟೆಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಬಂದಿರುವುದಾಗಿ ಅನುಭವಿಗಳು ಅಂದಾಜಿಸಿದ್ದಾರೆ ಮತ್ತು ವಸಂತ ಪಂಚಮಿ ತನಕ ಭಕ್ತರ ಆಗಮನ ಇದೇ ರೀತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಇಲ್ಲಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.
ದೇವಾಲಯದ ಪಟ್ಟಣವು ದಿನವಿಡೀ ಭಕ್ತರಿಂದ ತುಂಬಿತ್ತು. ರಾಮ ಮಂದಿರ ಮತ್ತು ಹನುಮಾನ್‌ಗರಿ ದೇವಾಲಯದ ಹೊರಗೆ ಭಕ್ತರ ಉದ್ದನೆಯ ಸರದಿ ಸಾಲುಗಳು ತಡರಾತ್ರಿಯವರೆಗೂ ಕಾಣಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.