ADVERTISEMENT

7ರ ಹರೆಯದ ಬಾಲಕನ ಬಾಯಿಂದ 526 ಹಲ್ಲು ಕಿತ್ತ ವೈದ್ಯರು!

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:53 IST
Last Updated 31 ಜುಲೈ 2019, 14:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಚೆನ್ನೈ ನಗರಗದ ಸವಿತಾ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ವೈದ್ಯರು ಏಳರ ಹರೆಯದ ಬಾಲಕನ ಬಾಯಿಯಿಂದ ಸರ್ಜರಿ ಮೂಲಕ526 ಹಲ್ಲುಗಳನ್ನು ಕಿತ್ತು ತೆಗೆದಿದ್ದಾರೆ.

ಅಪರೂಪವೆಂದೆನಿಸಿದ ಸಿಸಿಒ (compound composite ondontome) ನಿಂದ ಬಳಲುತ್ತಿದ್ದ ಬಾಲಕನ ಬಲಭಾಗದ ಕೆಳದವಡೆ ಊದಿಕೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ಮೂರು ವರ್ಷದವನಿರುವಾಗ ದವಡೆ ಊದಿಕೊಂಡಿದ್ದನ್ನು ಹೆತ್ತವರು ಗಮನಿಸಿದ್ದರು. ಆಗ ಅವರು ಈ ಬಗ್ಗೆ ಅಷ್ಟೊಂದು ಗಮನ ಹರಿಸಲಿಲ್ಲ. ಅಷ್ಟೇ ಅಲ್ಲದೆ ಅದೇನೆಂದು ತಿಳಿಯಲು ಹೆತ್ತವರು ಪ್ರಯತ್ನಿಸಿದ್ದರೂ ಬಾಲಕ ಸಹಕರಿಸುತ್ತಿರಲಿಲ್ಲ.

ಕ್ರಮೇಣ ದವಡೆ ಹೆಚ್ಚು ಊದಿಕೊಂಡಾಗ ಹೆತ್ತವರು ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಲಿಲೊಫೇಶಿಯಲ್ ಸರ್ಜರಿ ವಿಭಾಗದ ಪ್ರೊಫೆಸರ್ ಪಿ.ಸೆಂಥಿಲ್‌ನಾಥನ್ ಹೇಳಿದ್ದಾರೆ.

ADVERTISEMENT

ಬಲಭಾಗದ ದವಡೆಯ ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ನಡೆಸಿದಾಗ ಬಾಯಲ್ಲಿ ತುಂಬಾ ಹಲ್ಲಿರುವುದನ್ನು ಪತ್ತೆ ಹಚ್ಚಿದ ವೈದ್ಯರು ಸರ್ಜರಿ ನಡೆಸಲು ನಿರ್ಧರಿಸಿದ್ದರು.ಅನಸ್ತೇಶಿಯಾ ನೀಡಿ ನಾವು ದವಡೆಯ ಸರ್ಜರಿ ನಡೆಸಿದಾಗ ಅಲ್ಲೊಂದು ಚೀಲ ಕಂಡೆವು.ಅದು 200 ಗ್ರಾಂಗಳಷ್ಟು ತೂಕವಿತ್ತು. ಅದನ್ನು ಹುಷಾರಾಗಿ ತೆಗೆದು ನೋಡಿದಾಗ ಅದರಲ್ಲಿ ಸಣ್ಣದು, ಮಧ್ಯಮ ಗಾತ್ರ ಮತ್ತು ದೊಡ್ಡದಾಗ 526 ಹಲ್ಲುಗಳಿದ್ದವು ಎಂದು ಸೆಂಥಿಲ್‌ನಾಥನ್ ಹೇಳಿದ್ದಾರೆ.

ಕೆಲವೊಂದು ಚಿಕ್ಕ ಗಾತ್ರದ ವಸ್ತುಗಳಾಗಿದ್ದು , ಹಲ್ಲಿನ ಗುಣವನ್ನು ಅವು ಹೊಂದಿವೆ.ಆ ಚೀಲದಿಂದ ಪ್ರತಿಯೊಂದು ಪುಟ್ಟ ಹಲ್ಲುಗಳನ್ನು ಹೊರ ತೆಗೆಯುವುದಕ್ಕಾಗಿ ವೈದ್ಯರಿಗೆ 5 ಗಂಟೆ ಅವಧಿ ಬೇಕಾಗಿ ಬಂತು.ಅದೊಂದು ಚಿಪ್ಪಿನೊಳಗಿದ್ದ ಮುತ್ತು ತೆಗೆಯುವ ಕಾರ್ಯವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಸರ್ಜರಿ ಮುಗಿದ ಮೂರನೇ ದಿನದಲ್ಲಿ ಬಾಲಕ ಸಹಜ ಸ್ಥಿತಿಯಲ್ಲಿದ್ದಾನೆ ಎಂದು ಪ್ರೊಫೆಸರ್ ಪ್ರತಿಭಾ ರಮಣಿ ಹೇಳಿದ್ದಾರೆ.

ಬಾಲಕನೊಬ್ಬನ ಬಾಯಿಯಲ್ಲಿ ಇಷ್ಟೊಂದು ಹಲ್ಲುಗಳಿದ್ದ ಪ್ರಕರಣ ಜಗತ್ತಿನಲ್ಲಿ ಇದೇ ಮೊದಲು ಎಂದು ಕೆಲವುವೈದ್ಯರುಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.