ADVERTISEMENT

ಮಾಜಿ ಶಾಸಕರು, ಪರಿಷತ್‌ ಸದಸ್ಯರಿಗೆ ನಿರ್ಬಂಧ

ಲೆಟರ್‌ಹೆಡ್‌ ಬಳಕೆ: ಉತ್ತರಪ್ರದೇಶ ಸ್ಪೀಕರ್‌ ನಿರ್ದೇಶನ

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST

ಲಖನೌ: ಸರ್ಕಾರದ ಲಾಂಛನ ಇರುವ ಲೆಟರ್‌ಹೆಡ್‌ಗಳನ್ನು ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯರು ಬಳಸುವಂತಿಲ್ಲ ಎಂದು ಉತ್ತರ ಪ್ರದೇಶದ ವಿಧಾನಸಭಾಧ್ಯಕ್ಷ ಎಚ್‌.ನಾರಾಯಣ ದೀಕ್ಷಿತ್‌ ಅವರು ನಿರ್ದೇಶನ ನೀಡಿದ್ದಾರೆ.

ಒಂದು ಸಂಘಟನೆಯಿಂದ ಹೊರ ಹೋದ ವ್ಯಕ್ತಿಗೆ ಆ ಸಂಸ್ಥೆಯ ಲಾಂಛನ ಇರುವ ಲೆಟರ್‌ಹೆಡ್ ಬಳಸಲು ನಿರ್ಬಂಧ ಇರುತ್ತದೆ. ಅದೇ ನಿಯಮವನ್ನು ಇಲ್ಲಿಯೂ ಅನ್ವಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಎರಡು ಸಾವಿರ ಮಂದಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯರು ಇದ್ದು, ಸರ್ಕಾರದ ಲಾಂಛನ ಇರುವ ಲೆಟರ್‌ಹೆಡ್‌ ಬಳಸದಂತೆ ಸ್ಪೀಕರ್‌ ನಿರ್ಬಂಧ ಹೇರಿರುವುದು ಇದೇ ಮೊದಲು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.