ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ₹10ರ ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತರಲಿದೆ. ಮಹಾತ್ಮ ಗಾಂಧಿ ಸರಣಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಹೊಸ ನೋಟು ಚಾಕ್ಲೇಟ್ ಕಂದು ಬಣ್ಣದಲ್ಲಿರಲಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೊಸ ನೋಟು ಬಂದರೂ ₹10ರ ಹಳೆ ನೋಟುಗಳು ಚಲಾವಣೆಯಲ್ಲಿರಲಿವೆ.
ಮಾರ್ಚ್ ತಿಂಗಳ ಆರಂಭದಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯ ಹೊಂದಿದ ₹10ರ ಹೊಸ ನೋಟುಗಳನ್ನು ಚಲಾವಣೆಗೆ ತರಲು ಸರ್ಕಾರ ಚಿಂತಿಸುತ್ತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು. ₹10ರ ಹೊಸ ನೋಟಿನಲ್ಲಿ ನಂಬರ್ ಫಲಕದಲ್ಲಿ ‘L’ ಅಕ್ಷರ ಇರಲಿದ್ದು, ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ. ನೋಟು ಮುದ್ರಣವಾದ ವರ್ಷ ಹಿಮ್ಮುಖವಾಗಿರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.