ADVERTISEMENT

13ರಿಂದ ಹೈದರಾಬಾದ್‌ನಲ್ಲಿ ‘ವಿಶ್ವ ಸಿಹಿ ಹಬ್ಬ’

ಪಿಟಿಐ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಹೈದರಾಬಾದ್‌ : ತೆಲಂಗಾಣ ಸರ್ಕಾರವು ಜನವರಿ 13ರಿಂದ ಮೂರು ದಿನಗಳ ಕಾಲ ಇಲ್ಲಿ ವಿಶ್ವ ಸಿಹಿ ಹಬ್ಬವನ್ನು ಆಯೋಜಿಸಿದ್ದು, ಆಹಾರ ಪ್ರಿಯರಿಗೆ 1,000 ಕ್ಕಿಂತಲೂ ಅಧಿಕ ಬಗೆಯ ಸಿಹಿ ತಿಂಡಿಗಳನ್ನು ಸವಿಯುವ ಅವಕಾಶ ಕಲ್ಪಿಸಿದೆ.

25 ರಾಜ್ಯಗಳ ಹಾಗೂ 15 ದೇಶಗಳ ವಿವಿಧ ಸಂಘಗಳ ಸದಸ್ಯರು ಹಬ್ಬದಲ್ಲಿ ಸಿಹಿತಿಂಡಿಗಳನ್ನು ತಯಾರಿಸಿ, ಪ್ರದರ್ಶನಕ್ಕೆ ಇರಿಸುವರು.

‘ಸಿಹಿತಿಂಡಿಗಳ ಹಬ್ಬ ಹಮ್ಮಿಕೊಳ್ಳುವ ಮೂಲಕ ಹೈದರಾಬಾದ್‌ ತನ್ನ ಲೋಕಮಿತ್ರ ಗುಣವನ್ನು ಪ್ರದರ್ಶಿಸಲಿದೆ’ ಎಂದು ಪ್ರವಾಸಸೋದ್ಯಮ ಮತ್ತು ಸಂಸ್ಕೃತಿ ಕಾರ್ಯದರ್ಶಿ ಬಿ. ವೆಂಕಟೇಶಂ ಹೇಳಿದ್ದಾರೆ.

ADVERTISEMENT

‘ವಿವಿಧ ಭಾಷಾ, ಸಾಂಸ್ಕೃತಿಕ, ಮತ್ತು ಪ್ರಾದೇಶಿಕ ಸಂಘಗಳ ಹಾಗೂ ಹೈದರಾಬಾದ್‌ನಲ್ಲಿ ನೆಲೆಸಿರುವ ವಿವಿಧ ದೇಶಗಳ ಜನರ ಸಹಯೋಗದಲ್ಲಿ ಈ ಹಬ್ಬವನ್ನು ಆಯೋಜಿಸಲಾಗಿದೆ’ ಎಂದಿದ್ದಾರೆ.

‘ಹೋಟೆಲ್‌, ಅಂಗಡಿಯವರಿಗೆ ಈ ಹಬ್ಬದಲ್ಲಿ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲು ಅನುಮತಿ ನೀಡಿಲ್ಲ.  ಸಂಘಗಳ ಸದಸ್ಯೆಯರೇ ಸಿಹಿತಿಂಡಿಗಳನ್ನು ತಯಾರಿಸಿ, ಪ್ರದರ್ಶಿಸುವರು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.