ADVERTISEMENT

ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ

ಏಜೆನ್ಸೀಸ್
Published 23 ಜನವರಿ 2018, 11:03 IST
Last Updated 23 ಜನವರಿ 2018, 11:03 IST
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ   

ಕೊಲ್ಕತ್ತ: ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು ಮೃತ ಪತ್ನಿಯ ಸ್ಮರಣಾರ್ಥ ಕೊಲ್ಕತ್ತದಲ್ಲಿ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದಾರೆ.

ಸಚಿವ ಪಾರ್ಥ ಚಟರ್ಜಿ ಅವರ ಪತ್ನಿ ಬಬ್ಲಿ ಚಟರ್ಜಿ ಅವರು ಕಳೆದ ವರ್ಷ ಜುಲೈನಲ್ಲಿ ಕೊನೆಯುಸಿರೆಳೆದಿದ್ದರು. ಹಾಗಾಗಿ ಇವರ ನೆನಪಿಗಾಗಿ ಬಬ್ಲಿ ಚಟರ್ಜಿ ಪೆಟ್ ಆಸ್ಪತ್ರೆ ನಿರ್ಮಿಸಲಿದ್ದಾರೆ.

ಬಬ್ಲಿ ಚಟರ್ಜಿ ಅವರು ಶ್ವಾನ ಪ್ರಿಯರು. ಶ್ವಾನಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಮನೆಯಲ್ಲಿ ಆರು ಶ್ವಾನಗಳಿದ್ದು, ಇವುಗಳ ಜತೆಗೆ ಇನ್ನೂ ಎರಡು ಶ್ವಾನಗಳನ್ನು ಸಾಕಲಾಗುತ್ತಿದೆ. ಅವರು ಶ್ವಾನಗಳನ್ನು ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಮನೆಮಕ್ಕಳಂತೆ  ಆರೈಕೆ ಮಾಡುತ್ತಿದ್ದರು. ಹಾಗಾಗಿ ಅವರ ನೆನಪು ಜೀವಂತವಾಗಿ ಉಳಿಯಲು ಶ್ವಾನ ಆಸ್ಪತ್ರೆಯನ್ನು ತೆಗೆಯುವ ಮನಸ್ಸಾಗಿದೆ ಎಂದು ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

ADVERTISEMENT

ಈ ಆಸ್ಪತ್ರೆಯಲ್ಲಿ ಶ್ವಾನಗಳ ಆರೈಕೆಯ ಜತೆಗೆ ಬೆಕ್ಕುಗಳಿಗೂ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಕೊಲ್ಕತ್ತದ ಬಘಜತಿನ್ ರೈಲ್ವೆ ನಿಲ್ದಾಣದ ಬಳಿಯಿರುವ 17 ಎಕರೆ ಭೂಮಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಹೇಳಿರುವ ಸಚಿವ ಅದಕ್ಕೆ ತಗುಲುವ ವೆಚ್ಚವನ್ನು ಮರೆಮಾಚಿದ್ದಾರೆ.

ಇದೀಗ ಸಚಿವ ಪಾರ್ಥ ಚಟರ್ಜಿ ಅವರ ಮಗಳು ವಿದೇಶದಲ್ಲಿ ನೆಲೆಸಿರುವುದರಿಂದ ಅವರು ಕೊಲ್ಕತ್ತದ ನಾಕ್ತಲ್‌ನಲ್ಲಿ ಆರು ಶ್ವಾನಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.