ADVERTISEMENT

ಚಲಿಸುತ್ತಿರುವ ರೈಲು ಮುಂದೆ ಸೆಲ್ಫಿ; ರೈಲು ಢಿಕ್ಕಿ ಹೊಡೆದು ವಿದ್ಯಾರ್ಥಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 14:08 IST
Last Updated 24 ಜನವರಿ 2018, 14:08 IST
ವಿಡಿಯೊ ದೃಶ್ಯ
ವಿಡಿಯೊ ದೃಶ್ಯ   

ಹೈದರಾಬಾದ್: ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಹೈದರಾಬಾದ್‍ನ ಬೊರಾಬಂದಾ ರೈಲ್ವೆ ನಿಲ್ದಾಣದ ಪಕ್ಕದಲ್ಲಿ 25ರ ಹರೆಯದ ಆರ್ ಶಿವ ಕುಮಾರ್ ಎಂಬ ವಿದ್ಯಾರ್ಥಿ ಭಾನುವಾರ ಮಧ್ಯಾಹ್ನ ಸೆಲ್ಫಿ ವಿಡಿಯೊ ತೆಗೆಯಲು ಪ್ರಯತ್ನಿಸಿದ್ದಾನೆ. ಎಂಎಂಟಿಎಸ್ ರೈಲು ಬರುತ್ತಿದ್ದ ಹಾಗೆ ಅದರ ಮುಂದೆ ನಿಂತು ಸೆಲ್ಫಿ ವಿಡಿಯೊ ಮಾಡುತ್ತಿದ್ದ ಈ ಯುವಕನಲ್ಲಿ ಅಲ್ಲಿಂದ ಸರಿದು ನಿಲ್ಲುವಂತೆ ಕೆಲವರು ಒತ್ತಾಯಿಸುತ್ತಿರುವ ದನಿ ವಿಡಿಯೊದಲ್ಲಿದೆ.

</p><p>ಆದರೆ ಇದನ್ನು ಲೆಕ್ಕಿಸದೆ ಯುವಕ ಸೆಲ್ಫಿ ವಿಡಿಯೊ ತೆಗೆಯಲು ಮುಂದಾಗಿದ್ದಾನೆ. ರೈಲು ಜೋರಾಗಿ ಸದ್ದು ಮಾಡಿದರೂ ಅದನ್ನು ಕಡೆಗಣಿಸಿದ ಯುವಕ ಕ್ಯಾಮೆರಾದಲ್ಲಿ ಕಣ್ಣು ನೆಟ್ಟು ವಿಡಿಯೊ ಸೆರೆ ಹಿಡಿಯುತ್ತಿದ್ದಂತೆ ರಭಸವಾಗಿ ಬಂದ ರೈಲು ಢಿಕ್ಕಿ ಹೊಡೆದಿದ.</p><p>ಢಿಕ್ಕಿ ಹೊಡೆಯುತ್ತಿರುವ ದೃಶ್ಯವು ಮೊಬೈಲ್‍ನಲ್ಲಿ  ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗಂಭೀರ ಗಾಯಗೊಂಡ ಯುವಕನನ್ನು  ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೊಳಪಡಿಸಲಾಗಿದೆ.</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.