ನವದೆಹಲಿ: ಹೆತ್ತ ತಾಯಿಯನ್ನೇ ಮಗನೊಬ್ಬ ಶೂಟ್‌ಔಟ್ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ದೆಹಲಿ ಹೊರವಲಯದ ಮುಂಡಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
‘ಘಟನೆಯಲ್ಲಿ 55 ವರ್ಷದ ರೋಹಿಣಿ ಎನ್ನುವರು ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರೋಹಿಣಿ ಅವರ 30 ವರ್ಷದ ಮಗಆರೋಪಿ ಸಂದೀಪ್ ಎನ್ನುವವನು ಪರಾರಿಯಾಗಿದ್ದಾನೆ‘ ಎಂದು ಡಿಸಿಪಿ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.
‘ನಿರುದ್ಯೋಗಿಯಾಗಿದ್ದ ಸಂದೀಪ ಬುಧವಾರ ರಾತ್ರಿ ಮನೆಗೆ ಬಂದು ತನ್ನ ತಾಯಿ ಜೊತೆ ಹಣಕಾಸಿನ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಶೂಟೌಟ್ ಆಗಿದೆ‘ ಎಂದು ಸಿಂಗ್ ತಿಳಿಸಿದ್ಧಾರೆ.
‘ರೀತು ಎನ್ನವರನ್ನು ಮದುವೆಯಾಗಿದ್ದ ಸಂದೀಪ ಹೆಂಡತಿಯನ್ನು ತವರಿನಲ್ಲಿ ಬಿಟ್ಟು ತನ್ನ ತಾಯಿ ಮೆನಯಲ್ಲಿ ಐದು ವರ್ಷದ ಮಗಳ ಜೊತೆ ವಾಸವಿದ್ದ. ತಾಯಿಗೆ ಗುಂಡೇಟು ನೀಡಿ, ನಂತರ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ‘ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.