ADVERTISEMENT

‘ಶಶಿಕಲಾ ವಿರುದ್ಧದ ಧರ್ಮಯುದ್ಧ ಯಶಸ್ವಿ’

ಪಿಟಿಐ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST

ಥೇಣಿ/ ಚೆನ್ನೈ: ‘ವಿ.ಕೆ. ಶಶಿಕಲಾ ಅವರ ವಿರುದ್ಧದ ನನ್ನ ದಂಗೆ ಯಶಸ್ವಿಯಾಗಿದೆ. ಅದರಿಂದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬಣ ಹಾಗೂ ನನ್ನ ನೇತೃತ್ವದ ಬಣ ಒಂದಾಗಿದೆ’ ಎಂದು ಉಪ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಹೇಳಿದ್ದಾರೆ.

‘ಶಶಿಕಲಾ ವಿರುದ್ಧದ ನಿಮ್ಮ ಧರ್ಮಯುದ್ಧ ಯಶಸ್ವಿಯಾಯಿತೇ’ ಎಂದು ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ಅಸ್ಥಿತ್ವದಲ್ಲಿದೆ. ಜನರು ಹಾಗೂ ಕಾರ್ಯಕರ್ತರಿಂದ ಆಯ್ಕೆಯಾದವರು ಮಾತ್ರ ಸರ್ಕಾರ ಹಾಗೂ ಪಕ್ಷವನ್ನು ಮುನ್ನಡೆಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ದಿನಕರನ್ ಬಣದ ಸೇರ್ಪಡೆ ಅಸಾಧ್ಯ’: ಬಂಡಾಯ ನಾಯಕ ಟಿ.ಟಿ.ವಿ ದಿನಕರನ್ ಅವರ ಬಣವನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಸ್ತಾವವನ್ನು ಆಡಳಿತಾರೂಢ ಎಐಎಡಿಎಂಕೆ ತಳ್ಳಿಹಾಕಿದೆ.

ಎಐಎಡಿಎಂಕೆ ಜೊತೆ ಸೇರಲು ಬಯಸಿರುವುದಾಗಿ ದಿನಕರನ್ ಮಂಗಳವಾರ ಹೇಳಿದ್ದರು. ಈ ಸಂಬಂಧ ಕೇಳಲಾದ ಪ್ರಶ್ನೆಗೆ, ‘ದಿನಕರನ್‌ ಬಣವನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಎಐಎಡಿಎಂಕೆ ಮುಖಂಡ, ಸಚಿವ ಡಿ. ಜಯಕುಮಾರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.