ADVERTISEMENT

ಲಾಲು ಪ್ರಸಾದ್ ಪುತ್ರಿ, ಅಳಿಯನಿಗೆ ಸಮನ್ಸ್: ಮಾರ್ಚ್ 5ರೊಳಗೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ

ಏಜೆನ್ಸೀಸ್
Published 8 ಫೆಬ್ರುವರಿ 2018, 11:17 IST
Last Updated 8 ಫೆಬ್ರುವರಿ 2018, 11:17 IST
ಮಿಸಾ ಭಾರತಿ (ಸಂಗ್ರಹ ಚಿತ್ರ)
ಮಿಸಾ ಭಾರತಿ (ಸಂಗ್ರಹ ಚಿತ್ರ)   

ನವದೆಹಲಿ: ಅಕ್ರಮ ಹಣಕಾಸು ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿ ಮತ್ತು ಅವರ ಪತಿ ಶೈಲೇಶ್ ಕುಮಾರ್‌ರನ್ನು ಆರೋಪಿಗಳು ಎಂದು ಪರಿಗಣಿಸಿರುವ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಸಮನ್ಸ್ ನೀಡಿದೆ.

ಮಿಸಾ ಅವರ ಕಂಪೆನಿ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್‌ ಅನ್ನೂ ಆರೋಪಿ ಎಂದು ಪರಿಗಣಿಸಿರುವ ನ್ಯಾಯಾಲಯ ಮಾರ್ಚ್‌ 5ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿದೆ.

ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೋಷಾರೋಪ ಪಟ್ಟಿಯ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶ ಎನ್‌.ಕೆ. ಮಲ್ಹೋತ್ರಾ ಈ ಆದೇಶ ನೀಡಿದ್ದಾರೆ.

ADVERTISEMENT

ಭಾರತಿ ಹಾಗೂ ಅವರ ಪತಿ ವಿರುದ್ಧ ವಕೀಲ ನಿತೇಶ್‌ ರಾಣಾ ಅವರ ಮೂಲಕ ಡಿ. 23ರಂದು ಜಾರಿ ನಿರ್ದೇಶನಾಲಯ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.