ADVERTISEMENT

ದೇಶದಲ್ಲಿ 577 ಮಕ್ಕಳನ್ನು ಅನಾಥರನ್ನಾಗಿಸಿದ ಕೋವಿಡ್‌!

ಪಿಟಿಐ
Published 25 ಮೇ 2021, 15:33 IST
Last Updated 25 ಮೇ 2021, 15:33 IST
ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಬೇಸರದಲ್ಲಿ ಹಿಂದಿರುಗುತ್ತಿರುವ ಕುಟುಂಬಸ್ಥರು (ಪಿಟಿಐ ಚಿತ್ರ)
ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಬೇಸರದಲ್ಲಿ ಹಿಂದಿರುಗುತ್ತಿರುವ ಕುಟುಂಬಸ್ಥರು (ಪಿಟಿಐ ಚಿತ್ರ)   

ದೆಹಲಿ: 'ಸಾಂಕ್ರಾಮಿಕ ರೋಗ ಕೋವಿಡ್‌ ದೇಶದಲ್ಲಿ 577 ಮಕ್ಕಳ ಅನಾಥರನ್ನಾಗಿಸಿದೆ. ತಂದೆ ತಾಯಿರನ್ನು ಕಳೆದುಕೊಂಡ ಆ ಮಕ್ಕಳು ತಮ್ಮ ಹತ್ತಿರದ ಸಂಬಂಧಿಗಳ ಆರೈಕೆಯಲ್ಲಿದ್ದಾರೆ,' ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

'ಈ ಮಕ್ಕಳನ್ನು ಸಂಬಂಧಿಸಿದ ರಾಜ್ಯ ಸರ್ಕಾರಗಳು ಕೈಬಿಟ್ಟಿಲ್ಲ. ಮಕ್ಕಳು ಜಿಲ್ಲಾ ಅಧಿಕಾರಿಗಳ ರಕ್ಷಣೆಯಲ್ಲಿದ್ದಾರೆ. ಆ ಮಕ್ಕಳಿಗೆ ಆಪ್ತಸಮಾಲೋಚನೆ ಅಗತ್ಯವಿದ್ದರೆ ನಿಮ್ಹಾನ್ಸ್‌ ಸಂಸ್ಥೆಯ ತಂಡ ಸದಾ ಸಿದ್ಧವಿದೆ,' ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

'ಈ ಮಕ್ಕಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ಜಿಲ್ಲೆಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅನಾಥರಾದ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆಯೂ ಇಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಯುನಿಸೆಫ್ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಸಭೆ ನಡೆಸಿದೆ' ಎಂದು ಮಾಹಿತಿ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.