ADVERTISEMENT

6 ಎಲ್‌ಇಟಿ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 16:14 IST
Last Updated 15 ಜನವರಿ 2022, 16:14 IST

ಶ್ರೀನಗರ: ಉತ್ತರ ಕಾಶ್ಮೀರದ ಸೊಪುರೆ ಹಾಗೂ ಬಂಡಿಪೋರಾ ಪ್ರದೇಶದಲ್ಲಿ ಲಷ್ಕರ್‌–ಎ–ತೈಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಆರು ಮಂದಿ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಸೋಪುರೆಯ ಬೊಮೈ ಪ್ರದೇಶದಲ್ಲಿ ಮಂಗಳವಾರ (ಜ.11) ಮೂವರು ಉಗ್ರರನ್ನು ಬಂಧಿಸಲಾಗಿದ್ದು, ಉಳಿದ ಮೂವರನ್ನು‌ ಶನಿವಾರ ಬಂಧಿಸಲಾಗಿದೆ.

ಅರಫತ್‌ ಮಜೀದ್‌ ದಾರ್‌, ತೌಸಿಫ್‌ ಅಹ್ಮದ್‌ ದಾರ್‌, ಮೊಮಿನ್‌ ನಜೀರ್‌ ಖಾನ್‌, ಗುಲಾಂ ಮೊಹಮ್ಮದ್‌ ಹಾಗೂ ಇರ್ಷಾದ್‌ ಹುಸೈನ್‌ ಎಂದು ಗುರುತಿಸಲಾಗಿದೆ.

ADVERTISEMENT

ಬಂಧಿತ ಉಗ್ರರಿಂದ ಎರಡು ಪಿಸ್ತೂಲ್‌, ಎರಡು ಮ್ಯಾಗಜೀನ್‌ಗಳು, 13 ಪಿಸ್ತೂಲ್‌ ಗುಂಡು ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

‘ಬಂಧಿತರು ನಿಷೇಧಿತ ಭಯೋತ್ಪಾದಕ ಸಂಘಟನೆಯ ಜತೆ ಗುರುತಿಸಿಕೊಂಡಿದ್ದು, ವಿದೇಶಿ ಭಯೋತ್ಪಾದಕರಿಗೆ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳು ಸೇರಿದಂತೆ ಲಾಜಿಸ್ಟಿಕ್ ಮತ್ತು ಇತರ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.