ADVERTISEMENT

61 ಮಂದಿ ಕಡಲ್ಗಳ್ಳರ ಸೆರೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 11:30 IST
Last Updated 15 ಮಾರ್ಚ್ 2011, 11:30 IST

ನವದೆಹಲಿ (ಐಎಎನ್‌ಎಸ್): ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ನೌಕಾಪಡೆ ಸಿಬ್ಬಂದಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 61 ಮಂದಿ ಕಡಲ್ಗಳ್ಳರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅಪಹರಣಕ್ಕೊಳಗಾಗಿದ್ದ 13 ನಾವಿಕರನ್ನು ಬಂಧ ಮುಕ್ತಗೊಳಿಸಿದ್ದಾರೆ.

ಕಡಲ್ಗಳ್ಳರು ಹಾಗೂ ನಾವಿಕರನ್ನು ವಿಚಾರಣೆಗಾಗಿ ಮುಂಬೈ ಹಾಗೂ ಕೊಚ್ಚಿಗೆ ಕರೆತರಲಾಗಿದೆ. ಆದರೆ ಅವರ ರಾಷ್ಟ್ರೀಯತೆ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ  ಎಂದು ನೌಕಾಪಡೆ ಮೂಲಗಳು ಸೋಮವಾರ ತಿಳಿಸಿವೆ. ಕಡಲ್ಗಳ್ಳರಿಂದ ಅಪಹರಣಕ್ಕೊಳಗಾದ ಹಡಗಿನಿಂದ ಭಾರತೀಯ ನೌಕಾಪಡೆ ವಿಚಕ್ಷಣಾ ದಳಕ್ಕೆ ಶುಕ್ರವಾರ ಸಂದೇಶ ರವಾನೆಯಾಗಿತ್ತು. ವಿಷಯ ತಿಳಿದ ಕೂಡಲೇ ನೌಕಾಪಡೆಯ ವಿಮಾನವನ್ನು ಕಡಲ್ಗಳ್ಳರಿದ್ದ ಪ್ರದೇಶಕ್ಕೆ ಕಳುಹಿಸಲಾಯಿತು.

ವಿಮಾನವನ್ನು ಕಂಡ ಕೂಡಲೆ ಕಡಲ್ಗಳ್ಳರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಕಡಲ್ಗಳ್ಳರಿದ್ದ ಮೂಲ ಹಡಗಿನ ಮೇಲೆ ಸತತ ದಾಳಿ ನಡೆಸಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.