ADVERTISEMENT

ಡೇಟಿಂಗ್‌ ಸೈಟಿನಲ್ಲಿ ₹73.5 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 12:10 IST
Last Updated 12 ಡಿಸೆಂಬರ್ 2019, 12:10 IST
   

ಮುಂಬೈ:ಡೇಟಿಂಗ್ಸೈಟ್‌ನಲ್ಲಿಸದಸ್ಯತ್ವಕೊಡಿಸುವುದಾಗಿನಂಬಿಸಿಹಿರಿಯ ನಾಗರಿಕರೊಬ್ಬರಿಂದ₹73.5 ಲಕ್ಷ ದೋಚಿದ ಘಟನೆ ಮುಂಬೈನಲ್ಲಿ ನಡೆದಿದೆ.

ಈ ಪ್ರಕರಣವನ್ನುಭೇದಿಸಿದಖಾರ್‌ಘರ್‌ಪೊಲೀಸರುಕೊಲ್ಕತ್ತಾದಲ್ಲಿನನಕಲಿ ಕಾಲ್ ಸೆಂಟರ್‌ ಮೇಲೆದಾಳಿಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೊದ್‌ಪುರ್‌ ನಿವಾಸಿ ಸ್ನೇಹ ಆಲಿಯಾಸ್‌ ಮಹಿ ದಾಸ್‌(25), ಮಂಡಲ್‌ಪುರದ ಪ್ರಭಾರ್‌ಸಾಹಾ(35), ಮತ್ತು ಹೌರಾದ ಅರುಣ್‌ ರಾಯ್‌ ಎಂದು ಗುರುತಿಸಲಾಗಿದೆ.

ಸ್ನೇಹಾ ಎಂಬುವರು ಹಿರಿಯ ನಾಗರಿಕನಿಗೆಕರೆಮಾಡಿ ಲೊಕಾನ್‌ಟೊ ಡೇಟಿಂಗ್‌ ಆ್ಯಪ್‌ನಲ್ಲಿರಿಜಿಸ್ಟರ್ಮಾಡಿದರೆ ನೀವುಬಹುಬೇಗ ಹುಡುಗಿಯರೊಂದಿಗೆಡೇಟ್ಮಾಡಬಹುದು, ನೀವುಕರೆದಲ್ಲಿಗೆಹುಡುಗಿಯರನ್ನುಕಳುಹಿಸಲಾಗುವುದು ಎಂದು ಆಮಿಷ ಒಡ್ಡಿದ್ದರು. ಇದಕ್ಕೆನೋಂದಣಿ ಶುಲ್ಕ ಮತ್ತು ಇತರ ಶುಲ್ಕಗಳು ಎಂದು ಹೇಳಿ ಹಣಪಡೆಯಲಾಗಿತ್ತು ಎಂದುಪೊಲೀಸರು ಹೇಳಿದ್ದಾರೆ.

ADVERTISEMENT

ಡೇಟಿಂಗ್ಸೈಟಿನಲ್ಲಿಯಾವುದೇ ಹುಡುಗಿ ಸಿಗದಿದ್ದಾಗಸದಸ್ಯತ್ವವನ್ನುರದ್ದುಗೊಳಿಸಿ ಹಣವನ್ನುಹಿಂದಿರುಗಿಸುವಂತೆ ಅವರು ಕೇಳಿ ಕೊಂಡಿದ್ದಾರೆ. ಅದಕ್ಕೆ ಹುಡುಗಿಯರಬೇಡಿಕೆಇಟ್ಟಿದ್ದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಆರೋಪಿಗಳು ಬೆದರಿಸಿದ್ದರು

ಆರೋಪಿಗಳು ಅವರಿಂದಒಟ್ಟಾರೆ ₹73.5 ಲಕ್ಷ ಹಣ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.