ADVERTISEMENT

ಈ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ 69 ಉಗ್ರರು ಒಳನುಸುಳಿದ್ದಾರೆ

ಪಿಟಿಐ
Published 7 ಆಗಸ್ಟ್ 2018, 9:47 IST
Last Updated 7 ಆಗಸ್ಟ್ 2018, 9:47 IST
ಕುಪ್ವಾರ ಗಡಿಯಲ್ಲಿ ಕಾವಲು ನಿರತರಾಗಿದ್ದ ಭಾರತೀಯ ಯೋಧರು ಪಿಟಿಐ ಚಿತ್ರ
ಕುಪ್ವಾರ ಗಡಿಯಲ್ಲಿ ಕಾವಲು ನಿರತರಾಗಿದ್ದ ಭಾರತೀಯ ಯೋಧರು ಪಿಟಿಐ ಚಿತ್ರ   

ನವದೆಹಲಿ: ಈ ವರ್ಷದ ಜೂನ್‌ ಅಂತ್ಯದವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ 69 ಉಗ್ರರು ಅಕ್ರಮವಾಗಿ ಒಳನುಸುಳಿದ್ದಾರೆ ಎಂದು ಲೋಕಸಭೆಗೆ ಸರ್ಕಾರ ಮಂಗಳವಾರ ತಿಳಿಸಿದೆ.

ಗಡಿಯುದ್ದಕ್ಕೂ ಉಗ್ರರಿಂದ 133 ಅಕ್ರಮ ಒಳನುಸುಳುವಿಕೆ ಯತ್ನಗಳು ನಡೆದಿವೆ. ಇವುಗಳಲ್ಲಿ 69 ಉಗ್ರರು ದೇಶದೊಳಗೆ ಬಂದಿದ್ದಾರೆ ಎಂದು ಗೃಹಖಾತೆ ರಾಜ್ಯ ಸಚಿವ ಹನ್ಸರಾಜ್‌ ಗಂಗಾರಾಮ್‌ ಅಹಿರ್‌ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ವರ್ಷದ ಜೂನ್‌ ಅಂತ್ಯದವರೆಗೆ 14 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇನ್ನು 50 ಉಗ್ರರು ಗಡಿಯಿಂದ ವಾಪಸಾಗಿದ್ದಾರೆ ಎಂದು ತಿಳಿಸಿದರು.

ADVERTISEMENT

ಕಳೆದ ವರ್ಷ ಗಡಿಯಿಂದ ಅಕ್ರಮವಾಗಿ 123 ಉಗ್ರರು ಒಳನುಸುಳಿ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದಾರೆ. 2017ರಲ್ಲಿ 406 ಅಕ್ರಮ ನುಸುಳುವಿಕೆ ಯತ್ನಗಳು ನಡೆದಿವೆ ಎಂದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಸ್ಥಳೀಯರು ಉಗ್ರರಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಭದ್ರತಾಪಡೆಗಳು ಭಯೋತ್ಪಾದನೆಯನ್ನು ಹತ್ತಿಕ್ಕಲು ತಕ್ಕ ಕ್ರಮ ಕೈಗೊಳ್ಳುತ್ತಿವೆ. 2014ರ ಜುಲೈವರೆಗೆ 368 ಉಗ್ರರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.