ADVERTISEMENT

ಉತ್ತರ ಪ್ರದೇಶ: ಆರನೇ ಹಂತದ ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 23:15 IST
Last Updated 2 ಮಾರ್ಚ್ 2022, 23:15 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ (ಪಿಟಐ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಗುರುವಾರ ನಡೆಯಲಿದೆ. 10 ಜಿಲ್ಲೆಗಳ 57 ಕ್ಷೇತ್ರಗಳಲ್ಲಿ 676 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕಾಂಗ್ರೆಸ್‌ ನಾಯಕ ಅಜಯ್‌ ಕುಮಾರ್‌ ಲಲ್ಲು ಮತ್ತು ಎಸ್‌ಪಿ ಅಭ್ಯರ್ಥಿ ಸ್ವಾಮಿ ಪ್ರಸಾದ್‌ ಮೌರ್ಯ ಸೇರಿ ಹಲವರ ಭವಿಷ್ಯ ನಿರ್ಧಾರವಾಗಲಿದೆ.

ಅಂಬೇಡ್ಕರ್‌ ನಗರ, ಬಲರಾಮ್‌ಪುರ, ಸಿದ್ಧಾರ್ಥ್‌ನಗರ, ಬಸ್ತಿ, ಸಂತ ಕಬೀರ್‌ ನಗರ, ಮಹಾರಾಜ್‌ಗಂಜ್‌, ಗೋರಖಪುರ, ಕುಶೀನಗರ, ದೇವರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ADVERTISEMENT

57 ಕ್ಷೇತ್ರಗಳಲ್ಲಿ 11 ಮೀಸಲು ಕ್ಷೇತ್ರಗಳಿವೆ. ಇಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ಇದೆ ಎನ್ನಲಾಗಿದೆ. ಸುಮಾರು 2.14 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ ಅವರ ಎದುರು ಸಮಾಜವಾದಿ ಪಕ್ಷದಿಂದ, ಬಿಜೆಪಿಯ ಮಾಜಿ ನಾಯಕ ಉಪೇಂದ್ರ ದತ್ತ ಶುಕ್ಲಾ ಅವರ ಪತ್ನಿ ಸ್ಪರ್ಧಿಸಿದ್ದಾರೆ. ಆಜಾದ್‌ ಸಮಾಜ್‌ ಪಕ್ಷದ ಸ್ಥಾಪಕ ಚಂದ್ರಶೇಖರ್‌ ಆಜಾದ್‌ ಕೂಡಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.