ADVERTISEMENT

ವಿದ್ಯುತ್‌ ಪ್ರವಹಿಸಿ ಏಳು ಆನೆಗಳ ಸಾವು

ಪಿಟಿಐ
Published 27 ಅಕ್ಟೋಬರ್ 2018, 14:19 IST
Last Updated 27 ಅಕ್ಟೋಬರ್ 2018, 14:19 IST
ಆನೆಗಳ ಸಾವು ಚಿತ್ರಕೃಪೆ: ಎನ್‌ಡಿಟಿವಿ
ಆನೆಗಳ ಸಾವು ಚಿತ್ರಕೃಪೆ: ಎನ್‌ಡಿಟಿವಿ   

ಧೆಂಕನಾಲ್‌: ವಿದ್ಯುತ್‌ ಹರಿದು ಏಳು ಕಾಡಾನೆಗಳು ಸಾವನ್ನಪ್ಪಿರುವ ಘಟನೆಧೆಂಕನಾಲ್ ಜಿಲ್ಲೆಯ ಕಾಮಲಂಗಾ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೃತ ಆನೆಗಳನ್ನು ಕಂಡ ಸ್ಥಳೀಯರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೂರು ಆನೆಗಳ ಮೃತದೇಹ ರಸ್ತೆಯಲ್ಲಿ, ಉಳಿದ ನಾಲ್ಕು ಮೃತದೇಹ ಕಾಲುವೆಯಲ್ಲಿ ದೊರಕಿವೆ.

ಸದಾರ್‌ ಅರಣ್ಯ ವ್ಯಾಪ್ತಿಯಲ್ಲಿ ಹದಿಮೂರು ಆನೆಗಳು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಏಳು ಆನೆಗಳಿಗೆ 11 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ತಂತಿ ತಗುಲಿ ಈ ಅನಾಹುತ ಸಂಭವಿಸಿದೆ ಎಂದುಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿತೇಂದ್ರನಾಥ್ ದಾಸ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.