ADVERTISEMENT

ಕಮರಿಗೆ ಬಿದ್ದ ಟೆಂಪೊ ಟ್ರಾವೆಲರ್‌: 7 ಸಾವು, 10 ಮಂದಿಗೆ ಗಾಯ 

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 2:36 IST
Last Updated 26 ಸೆಪ್ಟೆಂಬರ್ 2022, 2:36 IST
ಕಣಿವೆಗೆ ಬಿದ್ದಿರುವ ಬಸ್‌
ಕಣಿವೆಗೆ ಬಿದ್ದಿರುವ ಬಸ್‌    

ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಭಾನುವಾರ ಸಂಜೆ ಟೆಂಪೋ ಟ್ರಾವೆಲರ್‌ ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಮೃಪಟ್ಟಿದ್ದಾರೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಶಾಸಕರೊಬ್ಬರು ತಿಳಿಸಿದ್ದಾರೆ.

ಬಂಜಾರ್‌ನ ಬಿಜೆಪಿ ಶಾಸಕ ಸುರೇಂದರ್ ಶೌರಿ ಅವರು ಸೋಮವಾರ ಮಧ್ಯರಾತ್ರಿ 12.45 ರ ಸುಮಾರಿಗೆ ಸ್ಥಳದಿಂದಲೇ ನೇರವಾಗಿ ಫೇಸ್‌ಬುಕ್ ಲೈವ್‌ ಮಾಡಿದ್ದಾರೆ. ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಸಂಭವಿಸಿದ ಅಪಘಾತದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಮೊದಲಿಗೆ ಬಂಜಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕುಲು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮೃತರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ನಿವಾಸಿಗಳಾಗಿದ್ದಾರೆ ಎಂದು ಶಾಸಕ ಶೌರಿ ಹೇಳಿದ್ದಾರೆ. ಎಲ್ಲರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದಿದ್ದಾರೆ.

ಕತ್ತಲೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ಶೌರಿ ಧನ್ಯವಾದ ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.