ನವದೆಹಲಿ: 79ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ರಾಜಧಾನಿ ನವದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ, ಸತತ 12ನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಣ್ವಸ್ತ್ರ ಬೆದರಿಕೆ ಒಡ್ಡುತ್ತಿರುವ ನೆರೆಯ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.
ಮೋದಿ ಭಾಷಣದ ಮುಖ್ಯಾಂಶಗಳು ಇಂತಿವೆ..
* ಸಂವಿಧಾನಕ್ಕಾಗಿ ತ್ಯಾಗ ಮಾಡಿದ ಮೊದಲ ಭಾರತೀಯ ಶ್ಯಾಮ ಪ್ರಸಾದ್ ಮುಖರ್ಜಿ
* ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸುತ್ತೇನೆ.
* ಆಪರೇಷನ್ ಸಿಂಧೂರದ ವೀರ ಯೋಧರಿಗೆ ನಮನ ಸಲ್ಲಿಸುವ ದಿನವಿದು.
* ಪಹಲ್ಗಾಮ್ ದಾಳಿ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆಪರೇಷನ್ ಸಿಂಧೂರ ದೇಶ ಹಿಂದೆಂದೂ ನೋಡದ ಒಂದು ಕಾರ್ಯಾಚರಣೆಯಾಗಿದೆ.
* ಈ ಕಾರ್ಯಾಚರಣೆ ಮೂಲಕ ಪಾಕ್‌ನಲ್ಲಿ ಆಗಿರುವ ವಿನಾಶವು ತುಂಬಾ ದೊಡ್ಡದಾಗಿದ್ದು, ಅದರ ಬಗ್ಗೆ ಇನ್ನೂ ಹೊಸ ಹೊಸ ಮಾಹಿತಿ ಬರುತ್ತಿದೆ. ಪಾಕಿಸ್ತಾನದ ಉಗ್ರರ ನೆಲೆಗಳು, 6 ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ.
* ಪರಮಾಣು ಬೆದರಿಕೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ: ಕೆಂಪು ಕೋಟೆಯಿಂದ ಪ್ರಧಾನಿಯವರ ಸ್ಪಷ್ಟ ಸಂದೇಶ
* ನಾವು ಈಗ ಭಯೋತ್ಪಾದಕರು ಮತ್ತು ಭಯೋತ್ಪಾದನಾ ಬೆಂಬಲಿಗರಿಗೆ ಕಡಿವಾಣ ಹಾಕಿದ್ದೇವೆ.
* ಭಯೋತ್ಪಾದಕರು ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಸಿಂಧೂ ನದಿ ಒಪ್ಪಂದ ರದ್ಧತಿಗೆ ಕುರಿತು ಮೋದಿ ಹೇಳಿದ್ದಾರೆ.
* ಸಿಂಧು ನದಿ ನೀರು ಒಪ್ಪಂದವು ದೇಶದ ರೈತರಿಗೆ ಬಹಳ ಹಾನಿ ಮಾಡಿತ್ತು.
* ಆಪರೇಷನ್ ಸಿಂಧೂರದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಸಾಮರ್ಥ್ಯವನ್ನು ನಾವು ಕಂಡಿದ್ದೇವೆ.
* 50–60 ವರ್ಷಗಳಿಂದ ಸೆಮಿ ಕಂಡಕ್ಟರ್ ಉತ್ಪಾದನೆ ಯೋಜನೆ ಜಾರಿ ಮಾಡಿರಲಿಲ್ಲ.
* 12 ವರ್ಷಗಳಲ್ಲಿ ದೇಶದಲ್ಲಿ ಸೋಲಾರ್ ಎನರ್ಜಿ ಉತ್ಪಾದನೆ 30 ಪಟ್ಟು ಹೆಚ್ಚಾಗಿದೆ.
* ಭಾರತವು 5 ವರ್ಷಗಳಲ್ಲಿ ಶೇ 50ರಷ್ಟು ಶುದ್ಧ ಇಂಧನದ ಗುರಿ ಸಾಧನೆ ಮಾಡಿದೆ.
* ಭಾರತದ ಬಾಹ್ಯಾಕಾಶ ವಲಯಕ್ಕೆ ಶುಭಾಂಶು ಶುಕ್ಲಾ ಕೊಡುಗೆಯನ್ನು ಮೋದಿ ಸ್ಮರಿಸಿದ್ದಾರೆ. ಭಾರತವು ತನ್ನದೇ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಶ್ರಮಿಸುತ್ತಿದೆ ಎಂದಿದ್ದಾರೆ.
* ಭಾರತಕ್ಕೆ ತನ್ನದೇ ಆದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಯುವಕರಿಗೆ ಕರೆ ನೀಡಿದರು.
* ಫಿನ್‌ಟೆಕ್ ವಲಯದಲ್ಲಿ ಭಾರತದ ಸಾಮರ್ಥ್ಯವನ್ನು ಯುಪಿಐ ಜಗತ್ತಿಗೆ ತೋರಿಸಿದೆ
* ನಾವು ಸೆಮಿಕಂಡಕ್ಟರ್ ವಲಯದಲ್ಲಿ ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ತಯಾರಿಸಿದ ಚಿಪ್‌ಗಳು ಮಾರುಕಟ್ಟೆಗೆ ಬರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.