ಬಂಧನ
(ಸಾಂದರ್ಭಿಕ ಚಿತ್ರ)
ಠಾಣೆ: ಅಕ್ರಮವಾಗಿ ವಾಸವಾಗಿದ್ದ ಓರ್ವ ಮಹಿಳೆ ಸೇರಿ ಬಾಂಗ್ಲಾದೇಶದ 8 ಪ್ರಜೆಗಳನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
ಸುಳಿವು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ಮತ್ತು ಭಾನುವಾರ ಭಿವಂಡಿ ಪಟ್ಟಣದ ಕಲ್ಹೇರ್ ಮತ್ತು ಕೊಂಗಾವ್‌ನಲ್ಲಿ ದಾಳಿ ನಡೆಸಿದ್ದರು.
ಇವರೆಲ್ಲರೂ 22 ರಿಂದ 42 ವರ್ಷ ವಯಸ್ಸಿನವರಾಗಿದ್ದು, ಭಾರತದಲ್ಲಿ ಉಳಿಯಲು ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರು.
ಇವರಲ್ಲಿ ಮೂವರು ಚಿಂದಿ ಮಾರಾಟಗಾರರು, ಇಬ್ಬರು ಕೂಲಿ ಕಾರ್ಮಿಕರು, ಒಬ್ಬರು ಮೇಸ್ತ್ರಿ ಮತ್ತು ಇನ್ನೊಬ್ಬರು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ವಿದೇಶಿ ಪ್ರಜೆಗಳ ಕಾಯ್ದೆ ಮತ್ತು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.