ADVERTISEMENT

ಆಸ್ಕರ್ ಪ್ರಶಸ್ತಿ ಪ್ರದಾನ: ನೋಮ್ಯಾಡ್‌ಲ್ಯಾಂಡ್‌ ಉತ್ತಮ ಚಿತ್ರ

ಪಿಟಿಐ
Published 26 ಏಪ್ರಿಲ್ 2021, 6:34 IST
Last Updated 26 ಏಪ್ರಿಲ್ 2021, 6:34 IST
ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ‘ನೋಮ್ಯಾಡ್‌ಲ್ಯಾಂಡ್‌‘ ಚಿತ್ರದ ನಿರ್ದೇಶನಕ್ಕೆ ‘ಉತ್ತಮ ನಿರ್ದೇಶಕಿ‘ ಪ್ರಶಸ್ತಿ ಪಡೆದ ಕ್ಲೊಯೆ ಝಾವೊ ಅವರು ಪ್ರಶಸ್ತಿ ಫಲಕದೊಂದಿಗೆ ಸಂಭ್ರಮಿಸಿದ ಕ್ಷಣ
ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ‘ನೋಮ್ಯಾಡ್‌ಲ್ಯಾಂಡ್‌‘ ಚಿತ್ರದ ನಿರ್ದೇಶನಕ್ಕೆ ‘ಉತ್ತಮ ನಿರ್ದೇಶಕಿ‘ ಪ್ರಶಸ್ತಿ ಪಡೆದ ಕ್ಲೊಯೆ ಝಾವೊ ಅವರು ಪ್ರಶಸ್ತಿ ಫಲಕದೊಂದಿಗೆ ಸಂಭ್ರಮಿಸಿದ ಕ್ಷಣ   

ಲಾಸ್ಏಂಜಲೀಸ್‌: ಕೊರೊನಾ ಸಾಂಕ್ರಾಮಿಕದ ನಡುವೆ ಪ್ರತಿಷ್ಠಿತ 93ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಅಮೆರಿಕದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ ಮತ್ತು ಲಾಸ್‌ಏಂಜಲೀಸ್‌ನ ಯೂನಿಯನ್‌ ಸ್ಟೇಷನ್‌ನಲ್ಲಿ ನಡೆಯಿತು.

ಕ್ಲೋಯ್‌ ಝಾವೊ ನಿರ್ದೇಶನದ ‘ನೋಮ್ಯಾಡ್‌ಲ್ಯಾಂಡ್‌‘ ಸಿನೆಮಾ, ‘ಉತ್ತಮ ಚಲನಚಿತ್ರ‘ ಪುರಸ್ಕಾರ ಪಡೆದರೆ, ಆ ಸಿನಿಮಾದ ನಿರ್ದೇಶಕಿ ಕ್ಲೋಯ್‌ ಝಾವೊ ‘ಅತ್ಯುತ್ತಮ ನಿರ್ದೇಶಕ‘ ಪ್ರಶಸ್ತಿ ಮುಡಿಗೇರಿಸಿ ಕೊಂಡರು. ಈ ಸಿನಿಮಾದ ಪ್ರಮುಖ ತಾರಾಗಣದಲ್ಲಿರುವ ಫ್ರಾನ್ಸಿಸ್‌ ಮೆಕ್‌ಡೊರ್ಮಾಂಡ್‌ ‘ಉತ್ತಮ ನಟಿ ಪುರಸ್ಕಾರ‘ ಸ್ವೀಕರಿಸಿದರು.

2009ರಲ್ಲಿ ಕ್ಯಾಥರಿನ್ ಬಿಗೆಲೊ ಅವರ ‘ಹರ್ಟ್ ಲಾಕರ್‘ ಗೆಲುವಿನ ನಂತರ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಿರ್ದೇಶಕ ವಿಭಾಗದ ಟ್ರೋಫಿಯನ್ನು ಪಡೆದ ಏಕೈಕ ಮಹಿಳೆ ಝಾವೊ.

ADVERTISEMENT

ಖ್ಯಾತ ಬಾಲಿವುಡ್ ತಾರೆ ಆಂಥೊನಿ ಹಾಪ್‌ಕಿನ್ಸ್‌ ‘ದಿ ಫಾದರ್‌‘ ಚಲನ ಚಿತ್ರದ ನಟನೆಗಾಗಿ ‘ಉತ್ತಮ ನಟ‘ ಪುರಸ್ಕಾರ ಪಡೆದಿದ್ದಾರೆ. ಮ್ಯಾಡ್ಸ್ ಮಿಕೆಲ್ಸೆನ್ ಅಭಿನಯದ ಡ್ಯಾನಿಶ್ ಚಿತ್ರ ‘ಅನದರ್ ರೌಂಡ್‘ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪಡೆದಿದೆ.

ಖ್ಯಾತ ದಕ್ಷಿಣ ಕೊರಿಯಾದ ಹಿರಿಯ ತಾರೆ ಯೂಹ್‌–ಜಂಗ್‌ ಯೂನ್‌ ಅವರು, ‘ಮಿನಾರಿ‘ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಆಸ್ಕರ್‌ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಕೊರಿಯಾದ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

‌73 ವರ್ಷದ ಯೂನ್, ‘ಸಾಯೋನಾರಾ‘ (1957) ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟಿ ಮಿಯೋಶಿ ಉಮೆಕಿ ನಂತರ ಅತ್ಯುತ್ತಮ ಪೋಷಕ ನಟಿ ಆಸ್ಕರ್ ಪ್ರಶಸ್ತಿ ಪಡೆದ ಎರಡನೇ ಏಷ್ಯಾದ ಮಹಿಳೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.