ADVERTISEMENT

5 ವರ್ಷಗಳಲ್ಲಿ  942 ಬಾಂಬ್ ದಾಳಿ ನಡೆದಿದೆ, ಪ್ರಧಾನಿ ಕಿವಿಗೊಟ್ಟು ಕೇಳಲಿ: ರಾಹುಲ್

​ಪ್ರಜಾವಾಣಿ ವಾರ್ತೆ
Published 2 ಮೇ 2019, 8:52 IST
Last Updated 2 ಮೇ 2019, 8:52 IST
   

ನವದೆಹಲಿ: 2014ರ ನಂತರ ಭಾರತದಲ್ಲಿ ಯಾವುದೇ ಭೀಕರ ಸ್ಫೋಟಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಳೆದ ಐದು ವರ್ಷಗಳಲ್ಲಿ 942 ಬಾಂಬ್ ದಾಳಿ ನಡೆದಿದೆ ಎಂದಿದ್ದಾರೆ.

2014ರ ನಂತರ ಭಾರತದಲ್ಲಿ ಬಾಂಬ್ ಸದ್ದು ಕೇಳಲೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.ಆದರೆ ಪುಲ್ವಾಮಾ, ಪಠಾಣ್‌ಕೋಟ್, ಉರಿ, ಗಡ್‌ಚಿರೋಲಿ ಸೇರಿದಂತೆ 942 ಭೀಕರ ಬಾಂಬ್ ದಾಳಿಗಳು ನಡೆದಿವೆ. ಪ್ರಧಾನಿ ಕಿವಿಗೊಟ್ಟು ಕೇಳಲಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಮಹಾರಾಷ್ಟ್ರದಗಡ್‌ಚಿರೋಲಿಯಲ್ಲಿ ಬುಧವಾರ ನಕ್ಸಲರು ಐಇಡಿ ಸ್ಫೋಟಿಸಿದ್ದು ಇದರಲ್ಲಿ 15 ಪೊಲೀಸ್ ಕಮಾಂಡೊ ಮತ್ತು ನಾಗರಿಕರೊಬ್ಬರು ಹತ್ಯೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.