ADVERTISEMENT

ಕಾಶ್ಮೀರ: 370ನೇ ವಿಧಿ ರದ್ದತಿ ಬಳಿಕ 96 ನಾಗರಿಕರು, 366 ಉಗ್ರರ ಸಾವು –ಕೇಂದ್ರ

ಪಿಟಿಐ
Published 8 ಡಿಸೆಂಬರ್ 2021, 13:00 IST
Last Updated 8 ಡಿಸೆಂಬರ್ 2021, 13:00 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಲ್ಲಿ ಕನಿಷ್ಠ 96 ನಾಗರಿಕರು ಮೃತಪಟ್ಟಿದ್ದಾರೆ. ಇದೇ ವೇಳೆ 366 ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದುಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರಾಜ್ಯಸಭೆಗೆ ತಿಳಿಸಿದರು.

‘2019, ಆಗಸ್ಟ್‌ 5ರಂದು 370 ನೇ ವಿಧಿ ರದ್ದುಗೊಳಿಸಿದ ಬಳಿಕ ಯಾವುದೇ ಕಾಶ್ಮೀರಿ ಪಂಡಿತರು ಅಥವಾ ಹಿಂದೂಗಳನ್ನು ಸ್ಥಳಾಂತರಿಸಲಾಗಿಲ್ಲ. ಆದರೆ ಇತ್ತೀಚೆಗೆ, ಕಾಶ್ಮೀರದಲ್ಲಿ ವಾಸವಾಗಿದ್ದ ಕೆಲವು ಕಾಶ್ಮೀರಿ ಪಂಡಿತರ ಕುಟುಂಬಗಳು, ಮಹಿಳೆಯರು, ಮಕ್ಕಳು ಜಮ್ಮುವಿಗೆ ಸ್ಥಳಾಂತರಗೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಚಳಿಗಾಲದ ರಜೆ ಇರುವುದರಿಂದ ಜಮ್ಮುವಿಗೆ ತೆರಳಿದ್ದಾರೆ’ ಎಂದು ನಿತ್ಯಾನಂದ ರೈ ಅವರು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರಿಸಿದರು.

370 ನೇ ವಿಧಿ ರದ್ಧತಿ ಬಳಿಕ ಕಾಶ್ಮೀರದಲ್ಲಿ 96 ನಾಗರಿಕರು, 81 ಭದ್ರತಾ ಸಿಬ್ಬಂದಿ, 366 ಉಗ್ರರು ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.