ADVERTISEMENT

ವೈರಲ್ ವಿಡಿಯೊ: ಎರಡು ಹುಲಿಗಳ ನಡುವೆ ಕಾಳಗ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:32 IST
Last Updated 20 ಜನವರಿ 2021, 3:32 IST
   

ನವದೆಹಲಿ: ಅಭಯಾರಣ್ಯದಲ್ಲಿ ಎರಡು ಹುಲಿಗಳು ಕಾಳಗ ನಡೆಸುತ್ತಿರುವ ವಿಡಿಯೊವನ್ನು ಐಎಫ್‌ಎಸ್ ಅಧಿಕಾರಿಯೊಬ್ಬರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ವಿಡಿಯೊದಲ್ಲಿ ಎರಡು ಬಲಿಷ್ಠ ಹುಲಿಗಳು ಕಾಡಿನ ಹಾದಿಯಲ್ಲಿ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಸಮಯದಲ್ಲಿ ಮಾರ್ಗ ಬದಲಿಸುವ ಒಂದು ಹುಲಿ ಮತ್ತೊಂದು ಹುಲಿ ಮೇಲೆ ಎರಗುತ್ತದೆ. ಸ್ವಲ್ಪ ಸಮಯ ಜಗಳದ ಬಳಿಕ ಎರಡೂ ಹುಲಿಗಳು ತಮ್ಮ ಪಾಡಿಗೆ ತಾವು ತೆರಳುತ್ತವೆ.

ಎರಡು ಹುಲಿಗಳ ನಡುವಿನ ಕಾಳಗದ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

"ಕ್ಲಾಷ್ ಆಫ್ ದಿ ಟೈಟಾನ್ಸ್, ಭಾರತದಿಂದ. ವಾಟ್ಸಾಪ್‌ನಿಂದ ಬಂದ ವಿಡಿಯೊ ಎಂದು ಅಧಿಕಾರಿ ಬರೆದುಕೊಂಡಿದ್ದಾರೆ.

ವಿಡಿಯೊವನ್ನು ಎಲ್ಲಿ ಮತ್ತು ಯಾವಾಗ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ. ಅಭಯಾರಣ್ಯದ ಮೂಲಕ ಹಾದುಹೋಗುತ್ತಿದ್ದ ಚಲಿಸುವ ವಾಹನದಿಂದ ಇದನ್ನು ಚಿತ್ರೀಕರಿಸಲಾಗಿದೆ.

ಜುಲೈ 2019 ರಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಭಾರತವು ಹುಲಿ ಜನಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ದಾಖಲಿಸಿದೆ.2014 ರಲ್ಲಿ 2,226 ರಷ್ಟಿದ್ದ ಹುಲಿಗಳ ಸಂಖ್ಯೆ 2,967ಕ್ಕೆ ಏರಿದೆ. ದೇಶವು ಈಗ ವಿಶ್ವದ ಹುಲಿ ಜನಸಂಖ್ಯೆಯ ಶೇಕಡಾ 70 ಕ್ಕಿಂತಲೂ ಹೆಚ್ಚು ಹುಲಿಗಳ ನೆಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.