ADVERTISEMENT

ಕೋಲ್ಕತ್ತ: ಬೆಂಕಿಪೊಟ್ಟಣದಂತೆ ಧರೆಗುರುಳಿದ ಕಟ್ಟಡ

ಪಿಟಿಐ
Published 13 ಜೂನ್ 2020, 12:02 IST
Last Updated 13 ಜೂನ್ 2020, 12:02 IST
ನಾಲ್ಕು ಮಹಡಿ ಕಟ್ಟಡ ಧರೆಗುರುಳಿದಿದೆ.
ನಾಲ್ಕು ಮಹಡಿ ಕಟ್ಟಡ ಧರೆಗುರುಳಿದಿದೆ.   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಕಾಲುವೆಯ ಅಂಚಿನಲ್ಲಿದ್ದ ನಾಲ್ಕು ಮಹಡಿಯ ಕಟ್ಟಡವು ಜೋಡಿಸಿಟ್ಟ ಬೆಂಕಿಪೊಟ್ಟಣದಂತೆಉರುಳಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಕೆಲವು ವಾರಗಳಿಂದ ಜಿಲ್ಲೆಯ ದಾಸ್‌ಪುರ ಕಾಲೊನಿಯ ಗೊಮ್ರೈ ಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದ್ದರಿಂದ ನಿವಾಸಿಗಳು ಕಟ್ಟಡ ತೊರೆದಿದ್ದರು. ಹಾಗಾಗಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ‌ಧರೆಗುರುಳಿದಕಟ್ಟಡದ30 ಸೆಕೆಂಡಿನ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT