ADVERTISEMENT

ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಆದಿತ್ಯ ಠಾಕ್ರೆ

ಪಿಟಿಐ
Published 11 ನವೆಂಬರ್ 2022, 14:53 IST
Last Updated 11 ನವೆಂಬರ್ 2022, 14:53 IST
ರಾಹುಲ್‌ ಗಾಂಧಿ ಹಾಗೂ ಆದಿತ್ಯ ಠಾಕ್ರೆ (ಪಿಟಿಐ ಚಿತ್ರ)
ರಾಹುಲ್‌ ಗಾಂಧಿ ಹಾಗೂ ಆದಿತ್ಯ ಠಾಕ್ರೆ (ಪಿಟಿಐ ಚಿತ್ರ)   

ಹಿಂಗೋಲಿ (ಮಹಾರಾಷ್ಟ್ರ): ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವಭಾರತ್‌ ಜೋಡೊ ಯಾತ್ರೆಯಲ್ಲಿಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಯುವ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ಶುಕ್ರವಾರ ಪಾಲ್ಗೊಂಡರು. ಆದಿತ್ಯ ಹಿಂಗೋಳಿ ಜಿಲ್ಲೆಯ ಕಲಾಮ್ನುರಿಯಲ್ಲಿ ರಾಹುಲ್‌ ಜೊತೆ ಹೆಜ್ಜೆ ಹಾಕಿದರು.

ಮಹಾರಾಷ್ಟ್ರವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅಂಬಾದಾಸ್‌ ದಾನ್ವೆ ಮತ್ತು ಮಾಜಿ ಶಾಸಕ ಸಚಿನ್‌ ಅಹಿರ್‌ ಅವರುಆದಿತ್ಯ ಅವರೊಂದಿಗೆ ಯಾತ್ರೆಯಲ್ಲಿ ಕಾಣಿಸಿಕೊಂಡರು. ಯಾತ್ರೆ ವೇಳೆ ರಾಹುಲ್‌ ಮತ್ತು ಆದಿತ್ಯ ನೆರೆದಿದ್ದವರತ್ತ ಕೈ ಬೀಸುತ್ತಾ ಮುನ್ನಡೆದರು.

ದೇಶದಾದ್ಯಂತ ಕಾಂಗ್ರೆಸ್‌ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ 65ನೇ ದಿನಕ್ಕೆ ಕಾಲಿಟ್ಟಿದೆ.

ADVERTISEMENT

ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ಜನರೊಂದಿಗೆ ಸಮಾಲೋಚನೆ ನಡೆಸಿದರು.

ಗುರುವಾರ (ನವೆಂಬರ್ 10) ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕರಾದ ಸುಪ್ರಿಯಾ ಸುಳೆ ಮತ್ತು ಜೀತೇಂದ್ರ ಅವಾದ್‌ ಅವರೂ ಯಾತ್ರೆಯಲ್ಲಿ ಭಾಗವಹಿಸಿದ್ದರು.ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ಅವರು ಭಾಗವಹಿಸಿರಲಿಲ್ಲ. ಉದ್ಧವ್‌ ಠಾಕ್ರೆ ಅವರಿಗೂ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.