ADVERTISEMENT

ಮಹಿಳೆಯರಿಗೆ ₹2,500 ನೆರವು: ಜಾರಿಗೆ ಎಎಪಿ ಆಗ್ರಹ

ಪಿಟಿಐ
Published 2 ಮಾರ್ಚ್ 2025, 12:10 IST
Last Updated 2 ಮಾರ್ಚ್ 2025, 12:10 IST
ಎಎಪಿ ಲಾಂಛನ
ಎಎಪಿ ಲಾಂಛನ   

ನವದೆಹಲಿ: ‘ಮಹಿಳೆಯರಿಗೆ ಮಾಸಿಕ ₹2,500 ಗೌರವಧನ ನೀಡುವ ಚುನಾವಣೆ ಭರವಸೆಯನ್ನು ಈಡೇರಿಸದೇ ಬಿಜೆಪಿ ಮಹಿಳೆಯರಿಗೆ ‘ವಂಚಿಸುತ್ತಿದೆ’ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ಟೀಕಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಶಾಸಕ ಕುಲದೀಪ್‌ ಕುಮಾರ್ ಅವರು, ‘ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಸ ಸರ್ಕಾರದ ಮೊದಲ ಸಂಪುಟದಲ್ಲಿಯೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಇನ್ನೂ ಈಡೇರಿಲ್ಲ’ ಎಂದು ಆರೋಪಿಸಿದರು. 

ಮಾರ್ಚ್‌ 8ರ ಮಹಿಳಾ ದಿನಾಚರಣೆಯಂದು ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದೂ ಬಿಜೆಪಿ ಸರ್ಕಾರ ಭರವಸೆ ನೀಡಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಸಿದ್ಧತೆ ಆಗಿಲ್ಲ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.