ADVERTISEMENT

ಆಮ್‌ ಆದ್ಮಿ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದೆ: ಸಿಸೋಡಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 5:17 IST
Last Updated 8 ಡಿಸೆಂಬರ್ 2022, 5:17 IST
   

ನವದೆಹಲಿ: ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷ ಗಳಿಸಿರುವ ಮತಗಳು ನಮ್ಮನ್ನು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.


ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮೊದಲ ಸಲ ಆರೋಗ್ಯ ಮತ್ತು ಶಿಕ್ಷಣ ಆಧಾರಿತ ರಾಜಕೀಯ ಪಕ್ಷವೊಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶದ ಜನತೆಗೆ ಅಭಿನಂದನೆಗಳು ಎಂದಿದ್ದಾರೆ. ಗುಜರಾತ್‌ನಲ್ಲಿ ಎಎಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಎಎಪಿ 2 ಸ್ಥಾನ ಗೆಲ್ಲಬೇಕು ಮತ್ತು ಶೇ.6ರಷ್ಟು ಮತ ಗಳಿಸಬೇಕು.


ಗುಜರಾತ್‌ ಚುನಾವಣೆಯಲ್ಲಿ ಉತ್ತಮ ಪ್ರಚಾರ ನಡೆಸಿದ್ದ ಎಎಪಿ, ಎರಡಂಕಿ ಸ್ಥಾನ ಪಡೆಯುವುದು ಕಷ್ಟವೆಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು. ಇಷ್ಟಾಗಿಯೂ ಹೊಸ ಪಕ್ಷವಾಗಿ, ಬಿಜೆಪಿ ಅಬ್ಬರದ ನಡುವೆ ಗುಜರಾತ್‌ನಲ್ಲಿ ಎಎಪಿ ಬೆಳವಣಿಗೆ ಆಶಾದಾಯಕವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.