ADVERTISEMENT

ತನ್ನ ಗೋವಾ ರಾಜ್ಯ ಘಟಕದ ಸಂಘಟನೆಯನ್ನು ಸಂಪೂರ್ಣ ವಿಸರ್ಜಿಸಿದ ಎಎಪಿ!

ಎಎಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಸಂದೀಪ್ ಪಾಠಕ್ ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮೇ 2023, 13:24 IST
Last Updated 27 ಮೇ 2023, 13:24 IST
   

ನವದೆಹಲಿ: ಆಮ್ ಆದ್ಮಿ ಪಾರ್ಟಿಯು (ಎಎಪಿ) ತನ್ನ ಗೋವಾ ರಾಜ್ಯ ಘಟಕದ ಸಂಘಟನೆಯನ್ನು ವಿಸರ್ಜಿಸಿದೆ.

ಈ ಕುರಿತು ಎಎಪಿ ಶನಿವಾರ ಸಂಜೆ ಟ್ವೀಟ್ ಮಾಡಿದ್ದು, ಎಎಪಿ ಗೋವಾ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಒಂದು ಹೊರತುಪಡಿಸಿ ಘಟಕದ ಎಲ್ಲ ಪದಾಧಿಕಾರಿ ಸ್ಥಾನಗಳು, ಇತರೆ ಸಂಘಟನಾ ಸ್ಥಾನಗಳು ವಿಸರ್ಜನೆಯಾಗಲಿವೆ. ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ಎಎಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ. ಸಂದೀಪ್ ಪಾಠಕ್ ಸುತ್ತೋಲೆ ಮೂಲಕ ತಿಳಿಸಿದ್ದಾರೆ.

ಪ್ರಸ್ತುತ ಎಎಪಿ ಗೋವಾ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಅಮಿತ್ ಪಾಲೇಕರ್ ಆ ಸ್ಥಾನದಲ್ಲಿ ಮಾತ್ರ ಮುಂದುವರೆಯಲಿದ್ದು, ಉಳಿದ ಸಂಘಟನಾ ಹುದ್ದೆಗಳನ್ನು ಶೀಘ್ರವೇ ಪುನರ್ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಎಎಪಿಯ ಈ ದಿಢೀರ್ ನಡೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಇತ್ತೀಚೆಗೆ ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿ ಗೋವಾ ರಾಜ್ಯದ ಹೆಸರು ಕೂಡ ತಳಕು ಹಾಕಿಕೊಂಡಿತ್ತು. ಅಲ್ಲದೇ ಇತ್ತೀಚೆಗಷ್ಟೇ ಎಎಪಿಗೆ ಕೇಂದ್ರ ಚುನಾವಣಾ ಆಯೋಗ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.