ADVERTISEMENT

ಗುಪ್ತಚರ ಅಧಿಕಾರಿ ಕೊಲೆ ಆರೋಪ: ಕಾರ್ಪೊರೇಟರ್‌ ತಾಹಿರ್‌ಗೆ ಎಎಪಿ ಅಮಾನತು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 2:46 IST
Last Updated 28 ಫೆಬ್ರುವರಿ 2020, 2:46 IST
   

ದೆಹಲಿ: ಗುಪ್ತಚರ ವಿಭಾಗದ (ಐಬಿ) ಅಧಿಕಾರಿ ಅಂಕಿತ್‌ ಶರ್ಮಾ ಅವರ ಹತ್ಯೆಗೆ ಸಂಬಂಧಿಸಿ ಎಎಪಿಯ ಕೌನ್ಸಿಲರ್‌ತಾಹಿರ್‌ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹತ್ಯೆಯ ಹಿಂದೆತಾಹಿರ್‌ ಕೈವಾಡ ಇದೆ ಎಂದು ಅಂಕಿತ್‌ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದಾರೆ.

ದೆಹಲಿ ಎಎಪಿ ಕಾರ್ಪೊರೇಟರ್‌ ತಾಹಿರ್‌ ಹುಸೇನ್‌ ಒಡೆತನದ ಕಟ್ಟಡದಲ್ಲಿ ಪತ್ತೆಯಾದ ಪೆಟ್ರೋಲ್‌ ಬಾಂಬ್‌ಗಳು

ತಾಹಿರ್‌ ಅವರ ಮಾಲೀಕತ್ವದ ಐದು ಅಂತಸ್ತಿನ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ. ಹಿಂಸಾಚಾರದಲ್ಲಿತಾಹಿರ್‌ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ಕಪಿಲ್‌ ಮಿಶ್ರಾ ಅವರೂ ಆರೋಪಿಸಿದ್ದಾರೆ.ತಾಹಿರ್‌ ವಿರುದ್ಧ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಲಾಗಿದೆ.

ADVERTISEMENT
ತಾಹಿರ್‌ ಒಡೆತನದ ಕಟ್ಟಡದಲ್ಲಿ ಪತ್ತೆಯಾದ ಆ್ಯಸಿಡ್‌ ಪೊಟ್ಟಣಗಳು

ಇದೇ ಹಿನ್ನೆಲೆಯಲ್ಲಿ ಎಎಪಿಯು ತಾಹಿರ್‌ ಹುಸೇನ್‌ನನ್ನುಪಕ್ಷ ಪ್ರಾಥಮಿಕ ಸದಸ್ಯತ್ವದಿಂದಅಮಾನತು ಮಾಡಿ ಗುರುವಾರ ರಾತ್ರಿ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.