ADVERTISEMENT

ರಾಜ್ಯಸಭೆಗೆ ಮರು ಆಯ್ಕೆ: ಜೈಲಿನಿಂದ ಬಂದು ಪ್ರಮಾಣ ಸ್ವೀಕರಿಸಿದ ಸಂಜಯ್ ಸಿಂಗ್

ಪಿಟಿಐ
Published 19 ಮಾರ್ಚ್ 2024, 16:02 IST
Last Updated 19 ಮಾರ್ಚ್ 2024, 16:02 IST
<div class="paragraphs"><p>ಎಎಪಿ ಮುಖಂಡ ಸಂಜಯ್ ಸಿಂಗ್ ಅವರು ಮಂಗಳವಾರ ಎರಡನೇ ಅವಧಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಪತಿ ಧನಕರ್ ಅವರು ಪ್ರಮಾಣವಚನವನ್ನು ಬೋಧಿಸಿದರು. ಈ ವೇಳೆ ಸಂಜಯ್ ಸಿಂಗ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದಾರೆ.&nbsp;  </p></div>

ಎಎಪಿ ಮುಖಂಡ ಸಂಜಯ್ ಸಿಂಗ್ ಅವರು ಮಂಗಳವಾರ ಎರಡನೇ ಅವಧಿಗೆ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಪತಿ ಧನಕರ್ ಅವರು ಪ್ರಮಾಣವಚನವನ್ನು ಬೋಧಿಸಿದರು. ಈ ವೇಳೆ ಸಂಜಯ್ ಸಿಂಗ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದಾರೆ. 

   

–ಪಿಟಿಐ ಚಿತ್ರ

ನವದೆಹಲಿ: ರಾಜ್ಯಸಭೆಗೆ ಮರು ಆಯ್ಕೆಯಾಗಿರುವ ಎಎಪಿ ಮುಖಂಡ ಸಂಜಯ್ ಸಿಂಗ್ ಅವರು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರಿಂದ ಎರಡನೇ ಅವಧಿಗೆ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. 

ADVERTISEMENT

ಸಂಸತ್ತಿನಲ್ಲಿರುವ ಧನಕರ್ ಅವರ ಕಚೇರಿಯಲ್ಲಿ ತಮ್ಮ ತಂದೆ, ತಾಯಿ, ಹೆಂಡತಿ, ಮಗ ಮತ್ತು ಮಗಳ ಸಮ್ಮುಖದಲ್ಲಿ  ಸಂಜಯ್ ಸಿಂಗ್ ಅವರು ಪ್ರಮಾಣವಚನ ಪಡೆದುಕೊಂಡರು.  

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಸಂಜಯ್ ಸಿಂಗ್‌ ಬಂಧನಕ್ಕೆ ಒಳಗಾಗಿದ್ದರು. ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ, ತಿಹಾರ್ ಕಾರಾಗೃಹದಲ್ಲಿದ್ದ ಸಿಂಗ್ ಅವರನ್ನು ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಬಿಗಿ ಬಂದೋಬಸ್ತ್‌ನಲ್ಲಿ ಸಂಸತ್ತಿಗೆ ಕರೆತರಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.