ADVERTISEMENT

ಯೋಧರಿಗೆ ಪರಿಹಾರ: ನಾಲ್ಕು ಪಟ್ಟು ಹೆಚ್ಚಳ

ಪಿಟಿಐ
Published 5 ಅಕ್ಟೋಬರ್ 2019, 19:31 IST
Last Updated 5 ಅಕ್ಟೋಬರ್ 2019, 19:31 IST

ನವದೆಹಲಿ: ಯುದ್ಧದಲ್ಲಿ ಹುತಾತ್ಮರಾದ ಮತ್ತು ಗಾಯಗೊಂಡ ಸೇನಾ ಸಿಬ್ಬಂದಿಯ ಸಂಬಂಧಿಕರಿಗೆ ನೀಡುವ ಪರಿಹಾರ ಮೊತ್ತವನ್ನು ₹ 2 ಲಕ್ಷದಿಂದ ₹ 8 ಲಕ್ಷಕ್ಕೆ ಹೆಚ್ಚಿಸುವ ಮೂಲಕಸೇನೆಯ ಬಹುದಿನಗಳ ಬೇಡಿಕೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈಡೇರಿಸಿದ್ದಾರೆ.

ಪರಿಹಾರ ಮೊತ್ತವನ್ನು ‘ಯುದ್ಧ ಗಾಯಾಳುಗಳ ಸೇನಾ ಕಲ್ಯಾಣ ನಿಧಿ’ (ಎಬಿಸಿಡಬ್ಲ್ಯುಎಫ್‌) ಮೂಲಕ ನೀಡಲಾಗುವುದು ಎಂದುಸಚಿವಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.‌

‘ಇದುವರೆಗೂ ದೇಹದ ಶೇ 60 ಭಾಗ ಗಾಯಗೊಂಡವರು ಮತ್ತು ಹುತಾತ್ಮರಾದ ಸೇನಾ ಸಿಬ್ಬಂದಿ ಸಂಬಂಧಿಕರಿಗೆ ₹ 2 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಇದನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇದಲ್ಲದೆ ವಿಮಾ ಸೌಲಭ್ಯಗಳು ಸೇರಿವೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.