ADVERTISEMENT

ಡಬ್ ಸ್ಮ್ಯಾಶ್ ಮಾಡಿ ಮೋದಿ, ಅಚ್ಚೇದಿನ್‌ ಅನ್ನು ಗೇಲಿ ಮಾಡಿದ ಲಾಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 5:17 IST
Last Updated 14 ಏಪ್ರಿಲ್ 2019, 5:17 IST
   

ನವದೆಹಲಿ: ಹಾಸ್ಯಭರಿತ ಟೀಕೆಗಳಿಗೆ ಹೆಸರಾದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರು ಡಬ್‌ ಸ್ಮ್ಯಾಶ್‌ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಪ್ರಸ್ತಾಪಿಸಿದ್ದ ಅಚ್ಚೇದಿನ್‌ ಅನ್ನು ಗೇಲಿ ಮಾಡಿದ್ದಾರೆ.

‘ದೇಶಕ್ಕೆ ಒಳ್ಳೆಯ ದಿನಗಳು (ಅಚ್ಚೇದಿನ್‌) ಬರಲಿವೆ. ಪ್ರತಿ ಭಾರತೀಯನ ಖಾತೆಗೆ ₹15–20 ಲಕ್ಷ ಹಣ ಬರಲಿದೆ,’ ಎಂಬ ಮೋದಿ ಅವರ 2014ರ ಚುನಾವಣೆ ಸಂದರ್ಭದ ಭಾಷಣಕ್ಕೆ ತಮ್ಮ ಹಾವಭಾವ ಸೇರಿಸಿರುವ ಲಾಲು ಪ್ರಸಾದ್‌ ಆ ವಿಡಿಯೋವನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 16 ಸೆಕೆಂಡ್‌ಗಳ ಈ ವಿಡಿಯೋದ ಕೊನೆಯಲ್ಲಿ ಮೋದಿ ಭರವಸೆಗಳೆಲ್ಲ ‘ಜುಮ್ಲಾ’ ಎಂದು ಹೇಳುತ್ತಾರೆ ಲಾಲು.

‘ಅಚ್ಚೇದಿನ್‌ ಆನೇ ವಾಲೆ ಹೇ’ ಎಂಬುದು 2014ರ ಚುನಾವಣೆಯಲ್ಲಿ ಮೋದಿ ಅವರ ಜನಪ್ರಿಯ ಘೋಷವಾಕ್ಯವಾಗಿತ್ತು. ಮೋದಿ ಅವರ ಆ ಘೋಷ ವಾಕ್ಯವನ್ನು ಲಾಲು ಸದ್ಯ ಪರಿಹಾಸ್ಯಕ್ಕೀಡುಮಾಡಿದ್ದಾರೆ.

ADVERTISEMENT

ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್‌ ಯಾದವ್‌ ಅವರು ಎಲ್ಲಿ ಈ ವಿಡಿಯೋ ಮಾಡಿದರು ಎಂಬುದು ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.