ADVERTISEMENT

ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 20:02 IST
Last Updated 8 ಆಗಸ್ಟ್ 2020, 20:02 IST

ಚೆನ್ನೈ: ಇಲ್ಲಿಯ ಪ್ರತಿಷ್ಠಿತ ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕೊಡಮಾಡುವ ತನಿಖಾ ಪತ್ರಿಕೋದ್ಯಮ ಮತ್ತು ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಪತ್ರಕರ್ತರಾದ ನಿತಿನ್‌ ಸೇಠಿ ಮತ್ತು ಶಿವ ಸಹಾಯ್‌ ಸಿಂಗ್ ಭಾಜನರಾಗಿದ್ದಾರೆ.‌

ಪತ್ರಕರ್ತ ನಿತಿನ್‌ ಸೇಠಿ ಅವರಿಗೆ ತನಿಖಾ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮತ್ತೊಬ್ಬ ಪತ್ರಕರ್ತ ಶಿವ ಸಹಾಯ್ ಸಿಂಗ್‌ ಅವರಿಗೆ ಸಾಮಾಜಿಕ ಪರಿಣಾಮ ವರದಿಗೆ ನೀಡುವ ಕೆ.ಪಿ. ನಾರಾಯಣ ಕುಮಾರ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಪ್ರದಾನ ಮಾಡಲಾಯಿತು.

ಕೋವಿಡ್‌–19 ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸ್ವಾಮಿ ಸೌಮ್ಯನಾಥನ್‌ ಅವರು ಇಬ್ಬರಿಗೂ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಹಫಿಂಗ್ಟನ್‌ ಪೋಸ್ಟ್ ‌ಇಂಡಿಯಾ ಪತ್ರಿಕೆಯಲ್ಲಿ ‘ಪೈಸಾ ಪಾಲಿಟಿಕ್ಸ್‌’ ಶೀರ್ಷಿಕೆಯ ಅಡಿ ಯಲ್ಲಿಆರು ಕಂತುಗಳಲ್ಲಿ ಪ್ರಕಟವಾದ ಸೇಠಿ ಅವರ ಸರಣಿ ಲೇಖನಗಳಿಗೆ ಈ ಪ್ರಶಸ್ತಿ ಸಂದಿದೆ. ತನಿಖಾ ಪತ್ರಿಕೋದ್ಯಮಕ್ಕಾಗಿ ನೀಡುವ ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ ಮತ್ತು ಸಾಮಾಜಿಕ ಪರಿಣಾಮ ಬೀರುವ ಪತ್ರಿಕೋದ್ಯಮಕ್ಕಾಗಿ ನೀಡುವ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.ಪತ್ರಕರ್ತರಾದ ಜೆಫ್‌ ಜೋಸೆಫ್ ಪಾಲ್‌ ಕಡಿಚೀನಿ ಮತ್ತು ರೋಹಿಣಿ ಮೋಹನ್ ಅವರ ತನಿಖಾ ವರದಿಗಳಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ 105 ಮತ್ತು ಸಾಮಾಜಿಕ ಪರಿಣಾಮ ವರದಿ ವಿಭಾಗದಲ್ಲಿ 147 ಅರ್ಜಿ ಬಂದಿದ್ದವು.ಏಳು ಭಾಷೆಗಳ 60 ಸುದ್ದಿ ಸಂಸ್ಥೆಗಳ ಸಿಬ್ಬಂದಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.