ADVERTISEMENT

ತಮಿಳುನಾಡಿನಲ್ಲಿ 10,978 ಕೋವಿಡ್, 64 ಓಮೈಕ್ರಾನ್ ಪ್ರಕರಣ ದಾಖಲು

ಪಿಟಿಐ
Published 8 ಜನವರಿ 2022, 16:36 IST
Last Updated 8 ಜನವರಿ 2022, 16:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನೈ: ತಮಿಳುನಾಡಿನಲ್ಲಿ 24 ಗಂಟೆಗಳ ಅವಧಿಯಲ್ಲಿ 10,978 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 27,87,391ಕ್ಕೆ ಜಿಗಿದಿದೆ. ಒಂದೇ ದಿನ 10 ಸೋಂಕಿತರು ಸಾವಿಗೀಡಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ36,843ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

24 ಗಂಟೆಗಳಲ್ಲಿ 1,525 ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 40,260ಕ್ಕೆ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಶೂನ್ಯ ಒಮೈಕ್ರಾನ್ ಪ್ರಕರಣಗಳನ್ನು ದಾಖಲಿಸಿದ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 64 ಹೊಸ ಪ್ರಕರಣಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 185ಕ್ಕೆ ಏರಿದೆ ಎಂದು ವೈದ್ಯಕೀಯ ಬುಲೆಟಿನ್ ತಿಳಿಸಿದೆ.

ಏಪ್ರಿಲ್ 18, 2021ರಂದು ತಮಿಳುನಾಡಿನಲ್ಲಿ 10,723 ಹೊಸ ಪ್ರಕರಣಗಳುದಾಖಲಾಗಿದ್ದವು. ಇಂದು ವರದಿಯಾದ ಹೊಸ ಕೋವಿಡ್ -19 ಪ್ರಕರಣಗಳ ಪೈಕಿ ಸುಮಾರು ಅರ್ಧದಷ್ಟು 5,098 ಪ್ರಕರಣಗಳು ಚೆನ್ನೈನಿಂದಲೇ ವರದಿಯಾಗಿವೆ. ಚೆಂಗಲ್‌ಪೇಟ್‌ನಿಂದ 1,332 ಪ್ರಕರಣ ವರದಿಯಾಗಿವೆ.

ADVERTISEMENT

14 ಜಿಲ್ಲೆಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.