ADVERTISEMENT

India Covid Update: ಸಕ್ರಿಯ ಪ್ರಕರಣಗಳ ಸಂಖ್ಯೆ 47,922ಕ್ಕೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 5:35 IST
Last Updated 18 ಸೆಪ್ಟೆಂಬರ್ 2022, 5:35 IST
   

ನವದೆಹಲಿ: ದೇಶದಲ್ಲಿ ಕೋವಿಡ್–19 ದೃಢಪಟ್ಟ5,664 ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ47,922 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ.

ಶನಿವಾರ ದೇಶದಾದ್ಯಂತ46,848 ಪ್ರಕರಣಗಳು ಸಕ್ರಿಯವಾಗಿದ್ದವು.

ಸಚಿವಾಲಯ ಇಂದು ಬೆಳಗ್ಗೆ 8ಕ್ಕೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇದುವರೆಗೆ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ4,45,34,188 ತಲುಪಿದೆ. ಈ ಪೈಕಿ4,39,57,929 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಹೊಸದಾಗಿ ವರದಿಯಾಗಿರುವ 35 ಸಾವು ಸೇರಿದಂತೆ ಈವರೆಗೆ5,28,337 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.11ರಷ್ಟಿದೆ. ಗುಣಮುಖರಾದವರ ಪ್ರಮಾಣ ಶೇ98.71 ರಷ್ಟು ಇದೆ. ದೈನಂದಿನ ಸೋಂಕು ದೃಢ ದರ ಶೇ1.96 ಮತ್ತು ವಾರದ ಸೋಂಕು ದೃಢ ದರ ಶೇ1.79 ಆಗಿದೆ ಎಂದು ಸಚಿವಾಲಯ ಹೇಳಿದೆ.

ಇಲಾಖೆಯ ಮಾಹಿತಿ ಪ್ರಕಾರ ಇದುವರೆಗೆ216.56 ಕೋಟಿ ಡೋಸ್‌ ಕೋವಿಡ್ ಲಸಿಕೆ ವಿತರಿಸಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್‌ 7 ರಂದು 20 ಲಕ್ಷದ ಗಡಿ ದಾಟಿತ್ತು. ಅದೇ ವರ್ಷದ ಆಗಸ್ಟ್‌ 23ರಂದು 30 ಲಕ್ಷ, ಸೆಪ್ಟೆಂಬರ್‌ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ನಂತರ ಸೆಪ್ಟೆಂಬರ್‌ 28, ಅಕ್ಟೋಬರ್‌ 11, ಅಕ್ಟೋಬರ್‌ 29 ಹಾಗೂ ನವಂಬರ್‌ 20ರಂದು ಕ್ರಮವಾಗಿ 60 ಲಕ್ಷ, 70 ಲಕ್ಷ, 80 ಲಕ್ಷ ಹಾಗೂ 90 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ2020ರ ಡಿಸೆಂಬರ್‌ 19ರಂದು ಒಂದು ಕೋಟಿ, 2021ರ ಮೇ 4 ರಂದು ಎರಡು ಕೋಟಿ ಹಾಗೂ ಜೂನ್‌ 23ರಂದು ಮೂರು ಕೋಟಿಗಡಿ ದಾಟಿತ್ತು. ಈ ಸಂಖ್ಯೆಇದೇ ವರ್ಷ (2022) ಜನವರಿ 25ರಂದು ನಾಲ್ಕು ಕೋಟಿಗಿಂತ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.