ADVERTISEMENT

ವಿಚಾರಣೆಗೆ ಹಾಜರಾದ ನಟ ಶೈನ್‌ ಟಾಮ್‌ ಚಾಕೊ

ಪಿಟಿಐ
Published 19 ಏಪ್ರಿಲ್ 2025, 16:12 IST
Last Updated 19 ಏಪ್ರಿಲ್ 2025, 16:12 IST
ಶೈನ್‌ ಟಾಮ್‌ ಚಾಕೊ
ಶೈನ್‌ ಟಾಮ್‌ ಚಾಕೊ   

ಕೊಚ್ಚಿ: ಮಾದಕ ವಸ್ತು ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ಹೋಟೆಲ್‌ನಿಂದ ಪರಾರಿಯಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳ ನಟ ಶೈನ್‌ ಟಾಮ್‌ ಚಾಕೊ ಅವರು ಶನಿವಾರ ಪೊಲೀಸರ ಎದುರು ವಿಚಾರಣೆಗಾಗಿ ಹಾಜರಾದರು.

ಎರ್ನಾಕುಲಂ ಉತ್ತರ ಪೊಲೀಸ್‌ ಠಾಣೆ ಎದುರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಶನಿವಾರ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಶುಕ್ರವಾರ ನೋಟಿಸ್‌ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.