
ಪಿಟಿಐ
ನವದೆಹಲಿ: ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿ ಜ.19ರಂದು ಎರಡನೇ ಸುತ್ತಿನ ಪ್ರಶ್ನೋತ್ತರಕ್ಕೆ ಹಾಜರಾಗುವಂತೆ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.
ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳು ಸೋಮವಾರ 6ಕ್ಕೂ ಅಧಿಕ ಗಂಟೆ ವಿಜಯ್ ಅವರ ಪ್ರಶ್ನೋತ್ತರ ನಡೆಸಿದ್ದರು. ಎರಡನೇ ಸುತ್ತಿನ ಪ್ರಶ್ನೋತ್ತರಕ್ಕೆ ಮಂಗಳವಾರವೇ ಬರುವಂತೆ ಅಧಿಕಾರಿಗಳು ಹೇಳಿದ್ದರು. ‘ಸಂಕ್ರಾಂತಿಯ ಇರುವುದರಿಂದ ಮತ್ತೊಂದು ದಿನಾಂಕ ನೀಡಿ’ ವಿಜಯ್ ಅವರು ಮನವಿ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ತಮಿಳುನಾಡಿನ ಮಾಜಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎಸ್. ಡೇವಿಡ್ಸನ್ ದೇವಾಶೀರ್ವಾದಂ ಸೇರಿ ಕೆಲವು ಪೊಲೀಸ್ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಸೋಮವಾರ ತನಿಖೆಗೆ ಒಳಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.