ADVERTISEMENT

ತಮಿಳುನಾಡಿನಲ್ಲಿ ಜಾತಿ ಗಣತಿಗೆ ನಟ, ರಾಜಕಾರಣಿ ವಿಜಯ್ ಒತ್ತಾಯ

ಪಿಟಿಐ
Published 6 ಫೆಬ್ರುವರಿ 2025, 14:31 IST
Last Updated 6 ಫೆಬ್ರುವರಿ 2025, 14:31 IST
<div class="paragraphs"><p>ನಟ ವಿಜಯ್</p></div>

ನಟ ವಿಜಯ್

   

-ಎಕ್ಸ್‌ (ಟ್ವಿಟರ್‌) ಚಿತ್ರ

ಚೆನ್ನೈ: ಜಾತಿ ಗಣತಿಯನ್ನು ವಿಳಂಬ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ, ನಟ ವಿಜಯ್ ಸಮೀಕ್ಷೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ADVERTISEMENT

ಬಿಹಾರ, ಕರ್ನಾಟಕ ಮತ್ತು ತೆಲಂಗಾಣದಂತಹ ಇತರ ರಾಜ್ಯಗಳಲ್ಲಿ ಮಾಡಿದಂತೆ ತಮಿಳುನಾಡು ಸರ್ಕಾರವು ಜಾತಿ ಗಣತಿಯನ್ನು ಏಕೆ ನಡೆಸಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿರುವ ಅವರು, ಆಡಳಿತ ಪಕ್ಷವು ವಿಷಯವನ್ನು ನಿರ್ಲಕ್ಷಿಸುವ ಅಭ್ಯಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಜಾತಿ ಗಣತಿ ನಡೆಸದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಿಲುವಿನಲ್ಲಿವೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಆಡಳಿತ ಪಕ್ಷಗಳ ಸೋಗು ಬಯಲಾಗುವ ದಿನ ದೂರವಿಲ್ಲ ಎಂದು ವಿಜಯ್ ಹೇಳಿದ್ದಾರೆ.

ಜಾತಿ ಗಣತಿ ವಿಳಂಬವಾದರೆ ಸಾಮಾಜಿಕ ನ್ಯಾಯಕ್ಕೆ ಹಿನ್ನಡೆಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.