ADVERTISEMENT

ಚೆನ್ನೈ: ಅಪಹರಣಕ್ಕೆ ಸಹಕಾರ ನೀಡಿದ ಎಡಿಜಿಪಿ ಬಂಧನ

ಪಿಟಿಐ
Published 16 ಜೂನ್ 2025, 16:27 IST
Last Updated 16 ಜೂನ್ 2025, 16:27 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಚೆನ್ನೈ: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಹುಡುಗಿ ಮನೆಯವರು ಹುಡುಗನ 17 ವರ್ಷದ ತಮ್ಮನನ್ನು ಅಪಹರಣ ಮಾಡಿಸಿದ್ದಾರೆ. ಈ ಅಪಹರಣಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎಂ. ಜಯರಾಮ್‌ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ ಆದೇಶದ ಮೇರೆಗೆ ಜಯರಾಮ್‌ ಅವರನ್ನು ಬಂಧಿಸಲಾಗಿದೆ. ಹುಡುಗಿಯ ಮನೆಯವರು ಶಾಸಕ ಕೆ.ವಿ. ಕುಪ್ಪಮ್‌ ಅವರ ಸಹಕಾರ ಪಡೆದುಕೊಂಡಿದ್ದರು. ತನಿಖೆಗೆ ಸಹಕಾರ ನೀಡುವಂತೆ ಶಾಸಕ ಕುಪ್ಪಮ್‌, ದಲಿತ ಸಂಘದ ಮುಖ್ಯಸ್ಥ ಜಗನ್‌ ಮೂರ್ತಿ ಅವರಿಗೆ ನ್ಯಾಯಮೂರ್ತಿ ‍ಪಿ. ವೇಲ್‌ಮುರುಗನ್‌ ಅವರು ಆದೇಶ ನೀಡಿದ್ದಾರೆ.

ADVERTISEMENT

‘ಜನಪ್ರತಿನಿಧಿಗೆ ನೀಡಿದ ವಿಶೇಷ ಸವಲತ್ತುಗಳನ್ನು ಜನಸೇವಕರಿಗೂ ನೀಡಲು ಸಾಧ್ಯವಿಲ್ಲ. ಅಪರಾಧವೊಂದರಲ್ಲಿ ಭಾಗಿಯಾದರೆ ಪರಿಣಾಮ ಏನಾಗುತ್ತದೆ ಎಂದು ಜನಸೇವಕರಿಗೆ ತಿಳಿದಿರಬೇಕು. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಜಯರಾಮ್‌ ಅವರು ಅ‍ಪಹರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಅವರು ಹೇಳಿದ್ದಾರೆ’ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.