ADVERTISEMENT

ಸೂರ್ಯನ ಅಧ್ಯಯನಕ್ಕೆ ಸೆಪ್ಟೆಂಬರ್‌ 2ರಂದು ಆದಿತ್ಯ-ಎಲ್1 ಉಡಾವಣೆ: ಇಸ್ರೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2023, 10:19 IST
Last Updated 28 ಆಗಸ್ಟ್ 2023, 10:19 IST
ಟ್ವಿಟರ್‌ ಚಿತ್ರ–
ಟ್ವಿಟರ್‌ ಚಿತ್ರ–   @isro

ಬೆಂಗಳೂರು: ಇಸ್ರೊದ ಮಹತ್ವಾಕಾಂಕ್ಷಿ ಚಂದ್ರಯಾನ–3 ಯಶಸ್ವಿಯಾದ ಬೆನ್ನಲೇ ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆ ಸಿದ್ಧತೆ ನಡೆಸಿದೆ.

ಸೆಪ್ಟೆಂಬರ್‌2 ರಂದು ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ‘ಆದಿತ್ಯ ಎಲ್‌–1’ ಅನ್ನು ಉಡಾವಣೆ ಮಾಡುವುದಾಗಿ ಇಸ್ರೊ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ವೀಕ್ಷಕರಿಗೂ ನೇರವಾಗಿ ವೀಕ್ಷಿಸಲು ಸಂಸ್ಥೆ ಅವಕಾಶ ನೀಡಿದ್ದು, ನೋಂದಣಿ ಮಾಡಿಕೊಂಡು ಶ್ರೀಹರಿಕೋಟಾಕ್ಕೆ ಬರುವಂತೆ ಆಹ್ವಾನಿಸಿದೆ. 

ADVERTISEMENT

ಸೆಪ್ಟೆಂಬರ್ ಮೊದಲ ವಾರದಲ್ಲಿ ಸೂರ್ಯನ ಅಧ್ಯಯನದ 'ಆದಿತ್ಯ-ಎಲ್1' ಯೋಜನೆ ಕೈಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ದಿನಾಂಕ ಘೋಷಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದರು.

ಇದನ್ನೂ ಓದಿ: ISRO | Chandrayaan-3: ಚಂದ್ರಯಾನ 3ರ ಪಯಣದ ಹಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.