ADVERTISEMENT

ಆಂಧ್ರ ಪ್ರದೇಶ | ಕಲಬೆರಕೆ ಹಾಲು ಸೇವನೆ: ಮೃತರ ಸಂಖ್ಯೆ ಆರಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 16:12 IST
Last Updated 25 ಫೆಬ್ರುವರಿ 2026, 16:12 IST
   

ರಾಜಮಹೇಂದ್ರವರಂ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ  ಕಲಬೆರಕೆ ಹಾಲು ಸೇವಿಸಿ ಮತ್ತೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿದೆ.

ಮೂತ್ರಪಿಂಡ ವೈಫಲ್ಯದಿಂದ ಆರು ವರ್ಷದ ಬಾಲಕ ಹಾಗೂ 58 ವರ್ಷದ ಮಹಿಳೆ ಮೃತಪಟ್ಟಿದ್ದು, ಇನ್ನೂ ಏಳು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬೆರಕೆ ಹಾಲಿನ ಅಪಾಯದ ಬಗ್ಗೆ 106 ಕುಟುಂಬಗಳಿಗೆ ಸಲಹೆ ನೀಡಲಾಗಿದೆ. 315 ಜನರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಮೂವರು ಮಕ್ಕಳು ಸೇರಿದಂತೆ 15 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಸರ್ಕಾರಿ, ವಿಧಿವಿಜ್ಞಾನ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ 10 ಆಹಾರದ ಮಾದರಿ ಪರೀಕ್ಷಿಸಲಾಗುತ್ತಿದ್ದು, 48ರಿಂದ 72 ಗಂಟೆಗಳಲ್ಲಿ ವರದಿ ಬರಲಿದೆ. ಮರಣೋತ್ತರ ಪರೀಕ್ಷೆಯ ಮಾದರಿಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.